ಸಂಸತ್ತಿನ ಜಂಟಿ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ನವದೆಹಲಿ, ಜ.31- ಸರ್ವರಿಗೂ ಬೆಂಬಲ, ಸರ್ವರ ವಿಕಾಸ (ಸಬ್ ಕಾ ಸಾಥ್, ಸಬ್ ಕಾ ವಿಕಾಸ್) ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಬಡವರು, ಹಿಂದುಳಿವ ವರ್ಗದವರ ಅಭಿವೃದ್ದಿಯೇ ಸರ್ಕಾರದ ಹೆಗ್ಗುರಿ ಎಂದು ರಾಷ್ಟ್ರಪತಿ ಡಾ. ಪ್ರಣವ್ ಮುಖರ್ಜಿ ಹೇಳಿದ್ದಾರೆ. ಸಂಸತ್ತಿನ ಜಂಟಿ ಬಜೆಟ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನಶಕ್ತಿಗೆ ಕೇಂದ್ರ ಸರ್ಕಾರ ಗೌರವ ಸಮರ್ಪಿಸುತ್ತದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಿದ ಅವರು ಸ್ವಚ್ಚ ಭಾರತ ಆಂದೋಲನವು ಜನಾಂದೋನವಾಗಿ ಪರಿವರ್ತನೆಯಾಗಿದೆ. ಮೂರು ರಾಜ್ಯಗಳು ಬಯಲು ಶೌಚಾಲಯ ಮುಕ್ತ ರಾಜ್ಯವಾಗಿ ಘೋಷಿತವಾಗಿವೆ.
2.2 ಕೋಟಿ ಗ್ರಾಹಕರು ಎಲ್ಪಿಜಿ ಸಬ್ಸಡಿಯನ್ನು ತ್ಯಜಿಸಿದ್ದಾರೆ. 5 ಕೋಟಿ ಗ್ರಾಹಕರಿಗೆ ಹೊಸದಾಗಿ ಎಲ್ಪಿಜಿ ಸಂಪರ್ಕ ನೀಡಲಾಗಿದೆ. 26 ಕೋಟಿ ಜನ್ಧನ್ ಖಾತೆಗಳನ್ನು ತೆರೆಯಲಾಗಿದೆ. ದೀನ್ ದಯಾಳ್ ಯೋಜನೆಯಡಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮುದ್ರಾ ಯೋಜನೆಯಡಿ ಜನರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಸಾಮಾನ್ಯ ಬಜೆಟ್ ಮತ್ತು ರೈಲ್ವೆ ಬಜೆಟ್ ಮಂಡನೆಯಾಗುತ್ತಿದೆ ಎಂಧು ಅವರು ಹೇಳಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS