ಸಂಸತ್ ದಾಳಿಯ ಭಯೋತ್ಪಾದಕರ ಶವಗಳನ್ನು ಹೊರತೆಗೆಯಲು ಯತ್ನಿಸಿದ ಆರೋಪ : ಇಬ್ಬರು ಖುಲಾಸೆ

ಈ ಸುದ್ದಿಯನ್ನು ಶೇರ್ ಮಾಡಿ

Parliament

ನವದೆಹಲಿ, ನ.27- ಸಂಸತ್ ಮೇಲೆ ದಾಳಿಯಲ್ಲಿ ಹತರಾದ ಭಯೋತ್ಪಾದಕರ ಶವಗಳನ್ನು ಹೊರತೆಗೆಯಲು ಯತ್ನಿಸಿದ ಆರೋಪ ಎದುರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ದೆಹಲಿಯ ನ್ಯಾಯಾಲಯವೊಂದು ಖುಲಾಸೆಗೊಳಿಸಿದೆ.  ಈ ಪ್ರಕರಣದಲ್ಲಿ ರಘು ಮತ್ತು ವಿಜಯ್ ಶರ್ಮ ಅವರ ವಿರುದ್ಧ ಆರೋಪವನ್ನು ಸಾಬೀತು ಮಾಡಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ಇವರನ್ನು ಖುಲಾಸೆಗೊಳಿಸಲಾಗಿದೆ ಎಂದು ಮಹಾನಗರ ದಂಡಾಧಿಕಾರಿ ಅಭಿಲಾಷ್ ಮಲ್ಹೋತ್ರಾ ಹೇಳಿದ್ದಾರೆ.

ಉಗ್ರಗಾಮಿಗಳ ಬಗ್ಗೆ ಕುಪಿತರಾಗಿದ್ದ ಇವರು ಡಿಸೆಂಬರ್ 13ರಂದು ನವದೆಹಲಿಯ ಐಟಿಓ ರುದ್ರಭೂಮಿಗೆ ತೆರಳಿ ಸಮಾಧಿಯಿಂದ ಭಯೋತ್ಪಾದಕರ ಶವಗಳನ್ನು ಹೊರತೆಗೆದು ಹದ್ದುಗಳಿಗೆ ಆಹಾರವಾಗಿ ನೀಡಲು ಉದ್ದೇಶ ಹೊಂದಿದ್ದರು ಎಂದು ಆರೋಪಿಸಲಾಗಿತ್ತು.  ರಾಜಕೀಯ ಪಕ್ಷವೊಂದರ ಬೆಂಬಲದೊಂದಿಗೆ ಒಟ್ಟು 10 ಮಂದಿ ಸ್ಮಶಾನಕ್ಕೆ ತೆರಳಿ ಹೂತ್ತಿದ್ದ ಶವಗಳನ್ನು ಹೊರತೆಗೆಯಲು ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಐ.ಪಿ.ಎಸ್ಟೇಟ್ ಠಾಣೆ ಪೆÇಲೀಸರು ಇವರನ್ನು ಬಂಧಿಸಿ ರಘು ಮತ್ತು ವಿಜಯ್ ಅವರ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin