ಸಂಸಾರಿಯಾದ ಸನ್ಯಾಸಿ ಪ್ರಣವಾನಂದ

ಈ ಸುದ್ದಿಯನ್ನು ಶೇರ್ ಮಾಡಿ

Pranavaananda

ಕಲಬುರಗಿ ನ. 07: ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅರೆಮಲ್ಲಾಪುರದ ಶರಣಬಸವೇಶ್ವರ ಮಠದ ಪೀಠಾಧಿಪತಿ ವಿವಾದಿತ ಪ್ರಣವಾನಂದ ಸ್ವಾಮೀಜಿ ಸನ್ಯಾಸ್ಯತ್ವಕ್ಕೆ ತಿಲಾಂಜಲಿ ನೀಡಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಕೇರಳ ಮೂಲದ ಯುವತಿ ಜೊತೆ ಪ್ರಣವಾನಂದ ಸ್ವಾಮೀಜಿ ಸೋಮವಾರ ಹಸೆಮಣೆ ಏರಿದ್ದಾರೆ. ಶರಣಬಸವೇಶ್ವರ ದೇವಸ್ಥಾನದಲ್ಲಿ ಇಂದು 11.45ರಿಂದ 12.30ರ ಮುಹೂರ್ತದಲ್ಲಿ ಕೇರಳ ಮೂಲದ ಮೀರಾ ಎಂಬಾಕೆ ಜೊತೆ ಕಾವಿ ವಸ್ತ್ರಧಾರಿಯಾಗಿಯೇ ಪ್ರಣವಾನಂದ ಸಪ್ತಪದಿ ತುಳಿದಿದ್ದಾರೆ. ವಿವಾಹ ಸಮಾರಂಭದಲ್ಲಿ ಹಲವು ಮಠಾಧೀಶರು ಭಾಗಿಯಾಗಿದ್ದರು.

ನನ್ನ ಮಠದ ಪರಂಪರೆಯಲ್ಲಿ ಗೃಹಸ್ಥರಾಗಲು ಅವಕಾಶವಿದೆ. ಆದರೆ ನಾನು ಗೃಹಸ್ಥನಾದರು ಸಮಾಜ ಸೇವೆ ಬಿಡಲ್ಲ ಎಂದು ಪ್ರಣವಾನಂದ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಿ ವಧು, ವರರನ್ನು ಆಶೀರ್ವದಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin