ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಸಾಗರ ಕುಂಬಾರ ಅಂತ್ಯ ಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Sagar-01

ಬೆಳಗಾವಿ,ಆ19- ಜಮ್ಮು ಕಾಶ್ವೀರದಲ್ಲಿ ಸ್ವಾತಂತ್ರ್ಯೋತ್ಸವ ದಿನದಂದು ಟವರ್ ಮೇಲೆ ಹಾರಿಸಿದ್ದ ರಾಷ್ಟ್ರಧ್ವಜವನ್ನು ಕೆಳಗಿಳಿಸುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಗ್ರಾಮದ ಯೋಧ ಸಾಗರ ಕುಂಬಾರ (25) ಅವರ ಅಂತ್ಯ ಸಂಸ್ಕಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರೆವೇರಿತು.
ಜಮ್ಮು ಕಾಶ್ಮೀರದಿಂದ ದೆಹಲಿ ಮೂಲಕ ನೇರವಾಗಿ ಮೃತ ದೇಹವನ್ನು ಸಂಕೇಶ್ವರಕ್ಕೆ ತರಲಾಯಿತು. ಪಟ್ಟಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾವಿರಾರು ಜನರು ವೀರ ಯೋಧನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

Sagar-02

ಯೋಧನ ನಿಧನದ ನಿಮಿತ್ತ ಸಂಕೇಶ್ವರದಲ್ಲಿ ಸ್ವಯಂ ಪ್ರೇರಣೇಯಿಂದ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈಡೀ ಗ್ರಾಮವೇ ಕಂಬನಿ ಮಿಡಿದಿದೆ. ಹಿರಿಯ ಅಧಿಕಾರಿಗಳು ಗಣ್ಯರು ಅಂತ್ಯಕ್ರಿಯೆ ಕಾರ್ಯಿಕ್ರಮದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಕುಟುಂಬದ ಆಕ್ರಂದನ : ಪ್ರಾರ್ಥೀವ ಶಾರೀರ ಗ್ರಾಮಕ್ಕೆ ಬರುತ್ತಿದ್ದಂತೆ ಯೋಧನ ಕುಟುಂಬದ ಸದಸ್ಯರು ಆಕ್ರಂದನ ಮುಗಿಲು ಮುಟ್ಟಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.