ಸಕಾಲಕ್ಕೆ ಸಾಲ ಮರುಪಾವತಿಸಿ ಬ್ಯಾಂಕ್ ಅಭಿವೃದ್ಧಿಗೊಳಿಸಲು ಕರೆ
ಬಾಗೇಪಲ್ಲಿ, ಸೆ.16- ಬ್ಯಾಂಕಿನಿಂದ ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಿ ಬ್ಯಾಂಕ್ನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಬೇಕೆಂದು ಭೂ-ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕರೆ ನೀಡಿದರು.ಬ್ಯಾಂಕಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬ್ಯಾಂಕ್ನ್ನು ಪ್ರಗತಿ ಪಥದಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಸರ್ವ ಸದಸ್ಯರದ್ದು. ಬ್ಯಾಂಕಿನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವುದರಿಂದ ಕಷ್ಷದಲ್ಲಿರುವ ಮತ್ತೊಬ್ಬರಿಗೆ ಸಾಲ ಸೌಲಭ್ಯ ಕಲ್ಪಿಸಬಹುದು ಎಂದರು.
ಆದ್ದರಿಂದ ಬ್ಯಾಂಕಿನಿಂದ ಸಾಲ ಪಡೆದ ಪ್ರತಿಯೊಬ್ಬರು ಸಕಾಲಕ್ಕೆ ಮರು ಪಾವತಿ ಮಾಡುವುದರಿಂದ ಬ್ಯಾಂಕ್ನ್ನು ನಾವು ಉಳಿಸಿಕೊಳ್ಳಬಹುದು ಎಂದರು.ಬ್ಯಾಂಕ್ನ ಮಾಜಿ ಅಧ್ಯಕ್ಷ ಎಸ್.ನರಸಿಂಹಾರೆಡ್ಡಿ , ವ್ಯವಸ್ಥಾಪಕಿ ಓ.ಎನ್.ನಿರ್ಮಲ, ಉಪಾಧ್ಯಕ್ಷೆ ನಾಗರತ್ನಮ್ಮ, ನಿರ್ದೇಶಕರಾದ ಎಲ್.ಬೈರಾರೆಡ್ಡಿ, ಜಿ.ಬಯಪ್ಪ, ನಾರಾಯಣಮ್ಮ ಮಲ್ಲಿಕಾರ್ಜುನರೆಡ್ಡಿ, ರಾಮಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
► Follow us on – Facebook / Twitter / Google+