‘ಸಕ್ಸಸ್ಗೊಬ್ಬ’ ಸುದೀಪ್

ಈ ಸುದ್ದಿಯನ್ನು ಶೇರ್ ಮಾಡಿ

 

sudeepಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2 ಚಿತ್ರ ರಿಲೀಸಾದ ಎಲ್ಲಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆ ಕಾರಣಕ್ಕಾಗಿ ಚಿತ್ರದ ಯಶಸ್ವಿ ಪ್ರದರ್ಶನ ಮತ್ತು ಗಳಿಕೆಯ ಬಗ್ಗೆ ಮಾತನಾಡಲು ರಾಜ್ಯದ ವಿವಿಧ ಭಾಗಗಳ ವಿತರಣೆ ಹಕ್ಕನ್ನು ಪಡೆದಿದ್ದ ವಿತರಕರು ಮಾಧ್ಯಮಗಳ ಮುಂದೆ ಹಾಜರಾಗಿ ಗಳಿಕೆಯ ವಿವರಗಳನ್ನು ಹೇಳಿಕೊಂಡರು.   ಇದೇ ಸಂದರ್ಭದಲ್ಲಿ ಮಾತನಾಡಿದ ನಾಯಕ ನಟ ಸುದೀಪ್, ನಾನು ಇಲ್ಲಿಯವರೆಗೆ ಹಲವಾರು ಸಿನಿಮಾಗಳನ್ನು ಮಾಡಿದ್ದರೂ, ಯಾರೊಬ್ಬ ನಿರ್ಮಾಪಕರೂ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ಹಣ ಮಾಡಿದೆ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೇ ಮೊದಲಬಾರಿಗೆ ವಿತರಕರು ಮತ್ತು ನಿರ್ಮಾಪಕರು ಇಂಥದ್ದೊಂದು ಸಕ್ಸಸ್ ಮೀಟ್ ಮಾಡಿ, ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಸಿನಿಮಾವೊಂದನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕಾಗುತ್ತದೆ. ಇಡೀ ಸಿನಿಮಾ ಟೀಮ್ ಫ್ಯಾಮಿಲಿ ಥರ ಇದ್ದರೆ ಮಾತ್ರ ಒಂದೊಳ್ಳೆ ಸಿನಿಮಾ ಹೊರಬರಲು ಸಾಧ್ಯ. ಕೋಟಿಗೊಬ್ಬ-2 ಅದೇ ರೀತಿಯಲ್ಲಿ ತಯಾರಾದ ಸಿನಿಮಾ. ಈ ಚಿತ್ರದಲ್ಲಿ ಪ್ರತಿಯೊಬ್ಬರೂ ಅಚ್ಚುಕmಗಿ ತಮ್ಮ ಕೆಲಸಗಳನ್ನು ನಿರ್ವಹಿಸಿದ್ದಾರೆ. ನಮ್ಮ ಸಿನಿಮಾ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎನ್ನಲು ಖುಷಿಯಾಗುತ್ತಿದೆ. ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲೂ ಚಿತ್ರದ ಬಗ್ಗೆ ಬರುತ್ತಿರುವ ರೆಸ್ಪಾನ್ಸ್ ಕೇಳಿ, ಎಲ್ಲರ ಪರಿಶ್ರಮಕ್ಕೆ ತಕ್ಕ ರಿಸಲ್ಟ್ ಬಂದಿದೆ ಎಂಬ ತೃಪ್ತಿಯಿದೆ ಎಂದರು.

ನಂತರ ಮಾತನಾಡಿದ ನಿರ್ಮಾಪಕ ಸೂರಪ್ಪಬಾಬು, ಕೋಟಿಗೊಬ್ಬ-2 ಸಿನಿಮಾ ಆರಂಭಿಸಿದಾಗಿನಿಂದಲೂ ತನ್ನ ಮೇಲೆ ಸಾಕಷ್ಟು ಒತ್ತಡವಿತ್ತು. ಮೊದಲಬಾರಿಗೆ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ಮಾಡಿದ್ದರಿಂದ, ಎರಡೂ ಭಾಷೆಗಳಲ್ಲಿ ಚಿತ್ರವನ್ನು ನಾವಂದುಕೊಂಡಂತೆ ತೆರೆಮೇಲೆ ತರಬೇಕೆಂದು ಪ್ಲಾನ್ ಮಾಡಿಕೊಂಡಿದ್ದೆವು. ಸಿನಿಮಾದ ವಿಚಾರವಾಗಿ ಅನೇಕ ಬಾರಿ ನಾನು ಸುದೀಪ್ ಅವರೊಂದಿಗೆ ಜಗಳವಾಡಿದ್ದೇನೆ. ನನ್ನಿಂದ ಅವರಿಗೆ ಬೇಸರವಾಗಿದ್ದರೆ, ಅದಕ್ಕೆ ಕ್ಷಮೆಯಾಚಿಸುತ್ತೇನೆ. ನಮ್ಮಿಬ್ಬರ ಮಧ್ಯೆಯಿರುವ ಜಗಳ, ಭಿನ್ನಾಭಿಪ್ರಾಯ ಎಲ್ಲವೂ ಸಿನಿಮಾಗಾಗಿ. ಅಂತಿಮವಾಗಿ, ನಾವಂದುಕೊಂಡಂತೆ ಸಿನಿಮಾ ಸ್ಕ್ರೀನ್ ಮೇಲೆ ಬಂದಿದೆ. ಚಿತ್ರದ ಇಂಥದ್ದೊಂದು ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು ಎಂದರು.
ನಟ ರವಿಶಂಕರ್ ಮಾತನಾಡುತ್ತ ಇದೇ ಮೊದಲ ಬಾರಿಗೆ ಸಿನಿಮಾವೊಂದು ಗೆದ್ದು, ವಿತರಕರ ಸಕ್ಸಸ್ ಮೀಟ್ ನೋಡುತ್ತಿದ್ದೇನೆ. ಸಿನಿಮಾವೊಂದನ್ನು ಸಾಕಷ್ಟು ಶ್ರಮವಹಿಸಿ ತೆರೆಮೇಲೆ ತರಲಾಗಿದೆ. ಅಂತಹ ಸಿನಿಮಾ ಸಕ್ಸಸ್ ಆದಾಗ ಅದರಿಂದುಂಟಾಗುವ ಖುಷಿಯೇ ಬೇರೆ. ಸುದೀಪ್ ಜೊತೆಗೆ ಇದು ನನ್ನ ಐದನೇ ಸಿನಿಮಾ. ಇದೊಂದು ವಿಭಿನ್ನ ಅನುಭವ ಎಂದು ಹೇಳಿಕೊಂಡರು. ಕಾರ್ಯಕ್ರಮದಲ್ಲಿ ವಿತರಕರಾದ ಜಕ್ ಮಂಜು, ಮಹೇಶ್ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೋಟಿಗೊಬ್ಬ-2 ಚಿತ್ರದ ವಿತರಣೆಯ ಹಕ್ಕುಗಳನ್ನು ಪಡೆದಿದ್ದ ವಿತರಕರು ಹಾಜರಿದ್ದು, ತಮ್ಮ ತಮ್ಮ ಏರಿಯಾಗಳಲ್ಲಿ ಚಿತ್ರದ ಗಳಿಕೆಯ ಅಂಕಿ-ಅಂಶಗಳನ್ನು ವಿವರಿಸಿದರು.

‘ಸಕ್ಸಸ್ಗೊಬ್ಬ’ ಸುದೀಪ್

Facebook Comments

Sri Raghav

Admin