ಸಚಿನ್, ಗಂಗೂಲಿ, ದ್ರಾವಿಡ್‍ಗೆ ಸನ್ಮಾನ

ಈ ಸುದ್ದಿಯನ್ನು ಶೇರ್ ಮಾಡಿ

Sachin

ಮುಂಬೈ, ಮಾ. 31- ಐಪಿಎಲ್ 10ರ ಆವೃತ್ತಿಯು ಸಮೀಪಿಸುತ್ತಿದ್ದಂತೆ ಎಲ್ಲೆಡೆಯೂ ಕ್ರಿಕೆಟ್ ಕ್ರೇಜ್‍ನ ಕಾವು ಏರತೊಡಗಿದ್ದರೆ ಮತ್ತೊಂದೆಡೆ ಐಪಿಎಲ್‍ಗೆ ಆಗುವ ದುಬಾರಿ ವೆಚ್ಚದ ಮೇಲೆ ನಿಗಾ ಇಡಬೇಕೆಂದು ಬಿಸಿಸಿಐ ಮುಖ್ಯಸ್ಥ ರಾಜೀವ್ ಶುಕ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಏಪ್ರಿಲ್ 5 ರಂದು ಹೈದ್ರಾಬಾದ್‍ನಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮನರಂಜನೆಗಾಗಿ ಖರ್ಚು ಮಾಡುವ ಹಣಕ್ಕೆ ಸಾಕಷ್ಟು ಕಡಿವಾಣ ಹಾಕಬೇಕೆಂದು ಕೂಡ ಅವರು ತಿಳಿಸಿದ್ದಾರೆ.

ಆರಂಭಿಕ ಪಂದ್ಯವಲ್ಲದೇ ಫೈನಲ್ ಪಂದ್ಯವನ್ನು ಕೂಡ ಹೈದ್ರಾಬಾದ್‍ನಲ್ಲೇ ಆಯೋಜಿಸುವ ಮತ್ತು ಕ್ವಾಲಿಫೈಲರ್‍ನ ಒಂದು ಪಂದ್ಯವನ್ನು ಮುಂಬೈನಲ್ಲಿ ನಡೆಸುವುದಾಗಿ ತೀರ್ಮಾನವನ್ನು ಕೈಗೊಳ್ಳಲಾಯಿತು.

ಕ್ರಿಕೆಟ್ ದಿಗ್ಗಜರಿಗೆ ಸನ್ಮಾನ:

ಇದೇ ವೇಳೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮಹೋನ್ನತ ಸಾಧನೆಗೈದ ಕ್ರಿಕೆಟ್ ಕಲಿಗಳಾದ ಮಾಸ್ಟರ್ ಬ್ಲಾಸ್ಟರ್ ಸಚಿನ್‍ತೆಂಡೂಲ್ಕರ್, ಸೌರವ್‍ಗಂಗೂಲಿ, ಕನ್ನಡಿಗ ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಹಾಗೂ ವಿವಿಎಸ್ ಲಕ್ಷ್ಮಣ್‍ರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.  ಇದೇ ವೇಳೆ ಕಳೆದ ಒಂದು ವರ್ಷದಿಂದ ಭಾರತ ತಂಡವು ಸರ್ವಶ್ರೇಷ್ಠ ಪ್ರದರ್ಶನ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿರುವ ತರಬೇತುದಾರ ಅನಿಲ್‍ಕುಂಬ್ಳೆ ಅವರನ್ನು ಸನ್ಮಾನಿತರ ಪಟ್ಟಿಯಿಂದ ಕೈ ಬಿಟ್ಟಿರುವುದು ಅಸಮಾಧಾನ ಮೂಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin