ಸಚಿನ್ ಶ್ರೇಷ್ಠ , ಕೊಹ್ಲಿ ಸಮರ್ಥ ಆಟಗಾರ

ಈ ಸುದ್ದಿಯನ್ನು ಶೇರ್ ಮಾಡಿ

sachin-kohli

ನವದೆಹಲಿ, ಸೆ.1- ಕ್ರಿಕೆಟ್ ಇತಿಹಾಸದಲ್ಲಿ ಶತಕಗಳ ಶತಕ ಗಳಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಒಬ್ಬ ಶ್ರೇಷ್ಠ ಆಟಗಾರರಾಗಿದ್ದರೆ, ವಿರಾಟ್ ಕೊಹ್ಲಿ ಸಮರ್ಥ ಪ್ಲೇಯರ್ ಆಗಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಮೆಕ್‌ಗ್ರಾತ್ ಬಣ್ಣಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಮೆಕ್‌ಗ್ರಾತ್ ಇತ್ತೀಚೆಗೆ ವಿರಾಟ್ ಕೊಹ್ಲಿ ಅವರ ಆಟವನ್ನು ಗಮನಿಸುತ್ತಿದ್ದರೆ, ಸಚಿನ್ ತೆಂಡೂಲ್ಕರ್‌ರವರ ಶತಕಗಳ ಶತಕದ ಸಾಧನೆಯನ್ನು ಮೀರುವ ಆಟಗಾರರಾಗಿ ಬಿಂಬಿತವಾಗಲಿದ್ದಾರೆ ಎಂದರು.  46ರ ಹರಯದ ಸಚಿನ್ ಕ್ರಿಕೆಟ್ ಇತಿಹಾಸದಲ್ಲೇ ಒಬ್ಬ ಶ್ರೇಷ್ಠ ಆಟಗಾರರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಇತ್ತೀಚೆಗೆ ಬಹಳಷ್ಟು ಕ್ರೀಡಾಪ್ರೇಮಿಗಳು ವಿರಾಟ್ ಕೊಹ್ಲಿ ಅವರನ್ನು ಸಚಿನ್‌ರ ಸಮಾನ ಆಟಗಾರನೆಂದು ಬಿಂಬಿಸುತ್ತಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ಎಂತಹ ಕಠಿಣ ಪಂದ್ಯಗಳಲ್ಲೂ ಕೂಡ ತಂಡಕ್ಕೆ ಗೆಲುವು ದಕ್ಕಿಸಿಕೊಡುವ ಸಾಮರ್ಥ್ಯವನ್ನು ಕೊಹ್ಲಿ ಪ್ರದರ್ಶಿಸುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು 100 ಶತಕಗಳನ್ನು 200 ಟೆಸ್ಟ್ ಹಾಗೂ 463 ಏಕದಿನ ಪಂದ್ಯಗಳ ಮೂಲಕ ನಿರ್ಮಿಸಿದ್ದರೆ, ವಿರಾಟ್ ಕೊಹ್ಲಿ ಈಗಾಗಲೇ 37 ಶತಕಗಳನ್ನು ಕೇವಲ 45 ಟೆಸ್ಟ್ ಹಾಗೂ 171 ಏಕದಿನ ಪಂದ್ಯಗಳ ಮುಖಾಂತರ ಪೂರೈಸಿದ್ದಾರೆ. ಹಲವರು ಕ್ರಿಕೆಟ್ ಪಂಡಿತರೂ ಕೂಡ ಕ್ಲೊಹಿ ಆಕ್ರಮಣಕಾರಿ ಆಟವನ್ನು ಬಣ್ಣಿಸಿರುವುದೇ ಅಲ್ಲದೆ ಸಚಿನ್ ಮಾಡಿರುವ 100 ಶತಕಗಳ ಸಾಧನೆಯನ್ನು ಮೀರಲು ವಿರಾಟ್ ಕೊಹ್ಲಿ ಒಬ್ಬರಿಂದಲೇ ಸಾಧ್ಯ ಎನ್ನುವ ಮಾತನ್ನು ಮೆಕ್‌ಗ್ರಾತ್ ಕೂಡ ಸಮರ್ಥಿಸಿಕೊಂಡರು.

► Follow us on –  Facebook / Twitter  / Google+

Facebook Comments

Sri Raghav

Admin