ಸಚಿನ್ 200 ರನ್ ಅಜೇಯ ಆಟದ ತುಣುಕು ಖರೀದಿಸಿದ ಅರುಣ್

ಈ ಸುದ್ದಿಯನ್ನು ಶೇರ್ ಮಾಡಿ

Sachin

ನವದೆಹಲಿ, ಏ. 21- ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 200 ಅಜೇಯ ಆಟದ ವೀಡಿಯೋದ ತುಣುಕುಗಳನ್ನು ಚಿತ್ರ ನಿರ್ಮಾಪಕ ಅರುಣ್ ಪಾಂಡ್ಯಾ ಖರೀದಿಸಿದ್ದಾರೆ.
ಸಚಿನ್ ತೆಂಡೂಲ್ಕರ್‍ರ ಜೀವನಚರಿತ್ರೆ ಆಧಾರಿತ ಸಚಿನ್ ಎ ಬಿಲಿಯನ್ ಡ್ರಿಮ್ಸ್ ಚಿತ್ರಕ್ಕಾಗಿ ಸಚಿನ್‍ರ 200 ರನ್ ಗಳಿಸಿದ ದೃಶ್ಯಗಳು ಹಾಗೂ ಅವರು ನಿವೃತ್ತಿಯ ವೇಳೆ ಆಡಿದ ಮಾತುಗಳ ದೃಶ್ಯಾವಳಿಗಳನ್ನು ಬಳಸಿಕೊಳ್ಳಲು ಚಿತ್ರ ನಿರ್ಮಾಪಕರಿಗೆ ಬಿಸಿಸಿಐ ರಿಯಾಯಿತಿ ನೀಡಿಲ್ಲ.

ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ದೋನಿ ದಿ ಅನ್‍ಟೋಲ್ಡ್ ಸ್ಟೋರಿ ಚಿತ್ರಕ್ಕಾಗಿ ಧೋನಿಯ ಕೆಲವು ತುಣುಕನ್ನು ಬಳಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿತ್ತು.
ಆದರೆ ಮುಂಬೈ ಆಟಗಾರ ಸಚಿನ್ ತೆಂಡೂಲ್ಕರ್‍ರ ಜೀವನಾಧಾರಿತ ಚಿತ್ರಕ್ಕಾಗಿ ಅವರ ಜೀವನದ ಹಲವು ದೃಶ್ಯಗಳನ್ನು ಬಳಸಿಕೊಳ್ಳಲು ರಿಯಾಯಿತಿ ನೀಡದ ಬಿಸಿಸಿಐ ಹೊಸದೊಂದು ರೀತಿ ರಿವಾಜನ್ನು ಹೊರಡಿಸಿದೆ. ಆದ್ದರಿಂದ ನಾವು ಸಚಿನ್‍ರ ಜೀವನಾಧಾರಿತ ತುಣುಕನ್ನು ಖರೀದಿಸಬೇಕಾದ ಅನಿವಾರ್ಯತೆ ಬಂದೊದಗಿತು ಎಂದು ಮಹೇಂದ್ರ ಸಿಂಗ್ ಧೋನಿಯ ಬ್ಯುಸಿನೆಸ್ ಪಾಟರ್ನರ್ ಹಾಗೂ ಚಿತ್ರದ ನಿರ್ಮಾಪಕರಾದ ಅರುಣ್ ಪಾಂಡ್ಯಾ ತಿಳಿಸಿದ್ದಾರೆ.

ಸಚಿನ್ ಅವರು ಕೂಡ ತಮ್ಮ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರವನ್ನು ಜೇಮ್ಸ್ ಎರಿಕ್ಸನ್ ನಿರ್ದೇಶಿಸಿದ್ದು ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ನೀಡಿದ್ದು ಚಿತ್ರವು ಮೇ 26 ರಂದು ಬಿಡುಗಡೆ ಆಗಲಿದೆ ಎಂದು ನಿರ್ಮಾಪಕರಲ್ಲೊಬ್ಬರಾದ ಬಾಗ್‍ಚಂಡಕಾ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin