ಸಚಿವರ ಗೈರು : ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಗರಂ

ಈ ಸುದ್ದಿಯನ್ನು ಶೇರ್ ಮಾಡಿ

laxman-savadi

ಬೆಂಗಳೂರು, ಫೆ.8- ಸಚಿವರ ಗೈರು ಹಾಜರಿಯ ಬಗ್ಗೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ಇಂದಿನ ಪ್ರಶ್ನೋತ್ತರ ಅವಧಿಯಲ್ಲಿ ಬಹುತೇಕ ಪ್ರಶ್ನೆಗಳು ವೈದ್ಯಕೀಯ ಶಿಕ್ಷಣ ಸಚಿವ ಶರಣ್‍ಪ್ರಕಾಶ್ ಪಾಟೀಲ್ ಅವರಿಗೆ ಸಂಬಂಧಿಸಿದ್ದವು. ಆದರೆ, ಅವರು ಗೈರು ಹಾಜರಾಗಿದ್ದರು. ಅವರ ಪರವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉತ್ತರ ನೀಡುತ್ತಿದ್ದರು. ಉತ್ತರ ಸಮರ್ಪಕವಾಗಿಲ್ಲ ಎಂಬ ಆಕ್ಷೇಪಗಳ ನಡುವೆ ಶಾಸಕ ಲಕ್ಷ್ಮಣ ಸವದಿ ಅವರು ಸಂಬಧಪಟ್ಟ ಸಚಿವರು ನೇರವಾಗಿ ಉತ್ತರ ನೀಡಿದರೆ ಸ್ಪಷ್ಟತೆ ಸಿಗತ್ತದೆ. ಸಚಿವರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು. ಆಗ ಸಚಿವ ಖಾದರ್ ಅವರು ವೈಯಕ್ತಿಕ ಕೆಲಸದ ಮೇಲೆ ಶರಣ್‍ಪ್ರಕಾಶ್ ಪಾಟೀಲ್ ಅವರು ಸಭಾಧ್ಯಕ್ಷರ ಅನುಮತಿ ಪಡೆದು ಹೋಗಿದ್ದಾರೆ ಎಂದು ಹೇಳಿದರು. ಸಭಾಧ್ಯಕ್ಷ ಸ್ಥಾನದಲ್ಲಿದ್ದ ಶಿವಶಂಕರೆಡ್ಡಿ ಅವರು ಶರಣಪ್ರಕಾಶ್ ಪಾಟೀಲ್ ಅನುಮತಿ ಪಡೆದಿರುವುದನ್ನು ಖಚಿತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಗೋವಿಂದ ಕಾರಜೋಳ. ಸಚಿವರಿಗೆ ಸ್ವಂತ ಕೆಲಸಗಳಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ ಮಾಡಿಕೊಳ್ಳಲಿ. ಸದನ ಕೆಲಸ ಅತ್ಯಂತ ಪವಿತ್ರವಾದದ್ದು, ಅವರ ಖಾಸಗಿ ವ್ಯವಹಾರಗಳಿಗೆ ಸದನಕ್ಕೆ ಗೈರು ಹಾಜರಾಗುವುದು ಸರಿಯಲ್ಲ ಎಂದು ಹೇಳಿದರು. ನಾಳೆ ಸಚಿವರು ಬರಲಿದ್ದಾರೆ. ಆಗ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿ ಸಭಾಧ್ಯಕ್ಷರು ಸಮಾಧಾನಪಡಿಸಿದರು.

Facebook Comments

Sri Raghav

Admin