ಸಚಿವ ಎ.ಮಂಜು ಕೊಟ್ಟ ‘ಗಿಫ್ಟ್’ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

CM-0001

ಬೆಂಗಳೂರು,ಅ.18-ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದಲ್ಲಿ ಸರ್ಕಾರ ತೊಡಗಿಸಿದ್ದ 22 ಕೋಟಿ ರೂ.ಗಳನ್ನು ನಿಗಮ ಇಂದು ಮರುಪಾವತಿ ಮಾಡಿತು. ಈ ವಿಮೋಚನಾ ಷೇರು ಬಂಡವಾಳ 22 ಕೋಟಿ ರೂ.ಗಳ ಚೆಕ್ಕನ್ನು ರೇಷ್ಮೆ ಮತ್ತು ಪಶು ಸಂಗೋಪನಾ ಖಾತೆ ಸಚಿವ ಎ.ಮಂಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.  ಈ ಸಂದರ್ಭ ಸಚಿವ ಎ.ಮಂಜು ಮುಖ್ಯಮಂತ್ರಿಯವರಿಗೆ ಗಿಫ್ಟ್ ಪಾರ್ಸ್‍ಲ್‍ವೊಂದನ್ನು ನೀಡಿದರು. ಅದನ್ನು ಕೈಗೆ ತೆಗೆದುಕೊಂಡ ಸಿದ್ದರಾಮಯ್ಯ ತಕ್ಷಣ ಸಚಿವರಿಗೇ ಹಿಂದಿರುಗಿಸಿದರು.  ಈ ಹಿಂದೆ ತಮ್ಮ ಸ್ನೇಹಿತರಿಂದ ವಾಚ್ ಗಿಫ್ಟ್ ಪಡೆದ ಪ್ರಕರಣ ರಾಜ್ಯದಲ್ಲಿ ದೊಡ್ಡ ರಾದ್ದಾಂತವಾಗಿದ್ದನ್ನು ಸ್ಮರಿಸಿಕೊಂಡ ಮುಖ್ಯಮಂತ್ರಿಯವರು ಅದನ್ನು ಸಚಿವರಿಗೆ ಹಿಂದಿರುಗಿಸಿದರು ಎನ್ನಲಾಗಿದೆ. ಸಿದ್ದರಾಮಯ್ಯನವರು ಹಿಂದಿರುಗಿಸಿದ ಗಿಫ್ಟ್ ಪ್ಯಾಕನ್ನು ಸಚಿವ ಮಂಜು ವಾಪಸ್ ಪಡೆದ ನಂತರ ಆ ಪ್ರಕರಣ ಅಲ್ಲಿಗೇ ಮುಕ್ತಾಯವಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin