ಸಚಿವ ತನ್ವೀರ್‍ಸೇಠ್ ಮನೆ ಮುಂದೆ ದಾಂಧಲೆ ಮಾಡಿದ 22 ಕಾರ್ಯಕರ್ತರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Kannada--01

ಬೆಂಗಳೂರು, ಅ.7- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಅವರ ಮನೆಗೆ ನುಗ್ಗಿ ಧಿಕ್ಕಾರ ಕೂಗಿ ದಾಂಧಲೆ ನಡೆಸಿದ ಸಂಘಟನೆಯೊಂದರ 22 ಮಂದಿ ಕಾರ್ಯಕರ್ತರನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಸಚಿವರಿಗೆ ಮನವಿ ಕೊಡಬೇಕೆಂದು ಹೇಳಿ ಮನೆ ಮುಂದೆ ಜಮಾಯಿಸಿದ ಸಂಘಟನೆ ಕಾರ್ಯಕರ್ತರು ಮನೆ ಬಳಿ ಇದ್ದ ಸೆಕ್ಯೂರಿಟಿ ಗಾರ್ಡ್ ಅವರನ್ನು ತಳ್ಳಿ ಸಚಿವರಿಗೆ ಧಿಕ್ಕಾರ ಕೂಗುತ್ತ ಮನೆಯ ಕಿಟಕಿ ಗಾಜು ಒಡೆದು ಹೂವಿನ ಕುಂಡಗಳನ್ನು ಒಡೆದು ಹಾಕಿ ಕಾರಿನ ಗಾಜಿಗೂ ಹಾನಿ ಮಾಡಿದ್ದಾರೆ.

ಖಾಸಗಿ ಶಾಲೆಗಳನ್ನು ನಿಯಂತ್ರಿಸ ಬೇಕು, ಖಾಸಗಿ ಶಾಲಾ-ಕಾಲೇಜುಗಳಲ್ಲಿ ದುಬಾರಿ ಡೊನೇಷನ್ ಹಾವಳಿ ತಪ್ಪಿಸಬೇಕು, ಕನ್ನಡ ಮಾಧ್ಯಮದ ಹೆಸರಿನಲ್ಲಿ ಅನುಮತಿ ಪಡೆದು ಇಂಗ್ಲಿಷ್ ಶಾಲೆ ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಚಿವರ ಮನೆ ಮುಂದೆ ದಾಂಧಲೆ ನಡೆಸಿರುವ ಬಗ್ಗೆ ಮಾಹಿತಿ ಪಡೆದ ಹೈಗ್ರೌಂಡ್ಸ್ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.  ಸೆಕ್ಯೂರಿಟಿ ಗಾರ್ಡ್ ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ದೂರು ನೀಡಿದ್ದು, ದಾಂಧಲೆ ನಡೆಸಿದ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin