ಸಚಿವ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ ಮನೆ ಮೇಲೆ ಐಟಿ ರೇಡ್

ಈ ಸುದ್ದಿಯನ್ನು ಶೇರ್ ಮಾಡಿ

Vinay-Kulkarni--02

ಧಾರವಾಡ, ಮೇ 11- ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರ ಆಪ್ತ ಕಾರ್ಯದರ್ಶಿ ಪ್ರಶಾಂತ್ ಕೇಕರೆ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ತಡರಾತ್ರಿ ದಾಳಿ ಮಾಡಿದ್ದಾರೆ. ಮುಂಬೈ ಹಾಗೂ ಗೋವಾದ ಐವರು ಅಧಿಕಾರಿಗಳ ತಂಡ ಬಾಡಿಗೆ ವಾಹನದಲ್ಲಿ ಬಂದು ಏಕಾಏಕಿ ಪ್ರಶಾಂತ್ ಅವರ ಮನೆ ಮೇಲೆ ದಾಳಿ ಮಾಡಿ ಕಡತಗಳನ್ನು ಪರಿಶೀಲನೆ ಮಾಡಿದೆ.  ದಾಳಿ ವೇಳೆ ಮಹತ್ತರ ಕಡತಗಳು ಪತ್ತೆಯಾಗಿದ್ದು, ಇನ್ನೂ ಹೆಚ್ಚಿನ ದಾಖಲೆಗಳು ಸಿಗಬಹುದೆಂದು ಅಧಿಕಾರಿಗಳು ಇಂದು ಮಧ್ಯಾಹ್ನದವರೆಗೂ ತಪಾಸಣೆ ಮುಂದುವರಿಸಿದ್ದರು. ಇದೇ ವೇಳೆ ಸಚಿವರ ಆಪ್ತರಾದ ಸಿದ್ದುಪಾಟೀಲ, ಮೇಘರಾಜ ಹಿರೇಮಠ, ಮುತ್ತುಬಳ್ಳಾರಿ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin