ಸಣ್ಣ ವ್ಯಾಪಾರಿಗಳು ಕ್ಯಾಶ್ ಲೆಸ್ ವಹಿವಾಟು ಮಾಡಿದರೆ ಶೇ. 2 ರಷ್ಟು ತೆರಿಗೆ ವಿನಾಯ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Arun-j

ನವದೆಹಲಿ, ಡಿ.20- ನಗದು ರಹಿತ ವಹಿವಾಟಿಗೆ ಶೇ.2ರಷ್ಟು ಕಡಿಮೆ ತೆರಿಗೆ ವಿಧಿಸುವುದಾಗಿ ಪ್ರಕಟಿಸುವ ಮೂಲಕ ಕೇಂದ್ರ ಸರ್ಕಾರ ಸಣ್ಣ ವ್ಯಾಪಾರಿಗಳಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡಿದೆ. ದೆಹಲಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಡಿಜಿಟಲ್ ಪೇಮೆಂಟ್‍ಗೆ ಶೇ.8ರ ಬದಲು ಶೇ.6ರಷ್ಟು ತೆರಿಗೆ ವಿಧಿಸುವುದಾಗಿ ತಿಳಿಸಿದರು. ಎರಡು ಕೋಟಿ ರೂ.ಗಳವರೆಗಿನ ನಗದು ರಹಿತ ವ್ಯಾಪಾರ-ವಹಿವಾಟಿಗೆ ವಿನಾಯಿತಿ ನೀಡಲಾಗುವುದು. ಇ-ವ್ಯಾಲೆಟ್ ಬಳಕೆಗೆ ಹೆಚ್ಚು ಒತ್ತು ನೀಡುವುದಾಗಿ ಅವರು ಹೇಳಿದರು. ಡಿ.30ರೊಳಗೆ ಹಳೆ ನೋಟುಗಳನ್ನು ಜಮಾ ಮಾಡುವಂತೆ ಅವರು ದೇಶದ ಜನರಿಗೆ ತಿಳಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin