ಸತತ 3ನೇ ಚಿನ್ನದ ಪದಕಕ್ಕೆ ಮುತ್ತಿಟ್ಟ ಉಸೈನ್ ಬೋಲ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Bolt

ರಿಯೊ ಡಿ ಜನೈರೊ, ಆ.19-ಅಥ್ಲೀಟಿಕ್ ಜಗತ್ತಿನ ಅತಿವೇಗದ ಮಾನವ ಉಸೈನ್ ಬೋಲ್ಟ್ ಒಲಂಪಿಕ್ ಕ್ರೀಡಾಕೂಟದಲ್ಲಿ ಮತ್ತೊಂದು ದಾಖಲೆಯ ಹೊಸ ಅಧ್ಯಾಯ ಬರೆದಿದ್ದಾರೆ. ರಿಯೋದಲ್ಲಿ ತಡರಾತ್ರಿ ನಡೆದ 200 ಮೀಟರ್ ಓಟದಲ್ಲಿ ಸತತ 3ನೇ ಬಾರಿ ಬಂಗಾರದ ಪದಕ ಗೆದ್ದ ಬೋಲ್ಟ್ ನೂತನ ವಿಶ್ವ ವಿಕ್ರಮ ಸಾಧಿಸಿದರು.  ಸ್ಪರ್ಧೆಯಲ್ಲಿ ತೀವ್ರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿದ ಬೋಲ್ಟ್ 19.78 ಸೆಕೆಂಡ್ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿ ಗೆಲುವಿನ ನಗೆ ಬೀರಿದರು. ಇವರು ಸತತ ಮೂರನೇ ಜಯ ದಾಖಲಿಸುತ್ತಿದ್ದಂತೆ ಒಲಂಪಿಕ್ ಕ್ರೀಡಾಂಗಣ ಅಭಿಮಾನಿಗಳ ಪ್ರಚಂಡ ಕರತಾಡನ ಮಾರ್ದನಿಸಿತು. ಕೆನಡಾದ ಆಂಡ್ರೆ ಡಿ ಗ್ರಾಸ್ (20.02 ಸೆಕೆಂಡ್ಗಳು) ಮತ್ತು ಫ್ರಾನ್ಸ್ನ ಕ್ರಿಸ್ಟೋಫರ್ ಲಾಮೈಟ್ರೆ (20.12) ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin