ಸತತ 8 ಗಂಟೆಗಳ ಕಾಲ ಕ್ಯೂ ನಲ್ಲಿ ನಿಂತಿದ್ದ ಹಿರಿಯ ನಾಗರಿಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

hydrbad

ಹೈದರಾಬಾದ್, ನ.16-ನೋಟು ನಿಷೇಧದಿಂದಾಗಿ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲು ಬಂದಿದ್ದ ಹಿರಿಯ ನಾಗರಿಕರೊಬ್ಬರು ಸ್ಥಳದಲ್ಲೇ ಕುಸಿದು ಪ್ರಾಣ ಬಿಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೂಲತಃ ಅನಂತಪುರ ಜಿಲ್ಲೆಯ ಪುಟ್ಟಪರ್ತಿ ಮೂಲದವರಾದ 78 ವರ್ಷದ ನಿವೃತ್ತ ಸರ್ಕಾರಿ ಉದ್ಯೋಗಿ ಲಕ್ಷ್ಮೀ ನಾರಾಯಣ ಎಂಬುವವರು ಸಾವನ್ನಪ್ಪಿದ್ದು, ಲಕ್ಷ್ಮೀ ನಾರಾಯಣ ಅವರು ಮಾರೇಡ್ ಪಲ್ಲಿಯಲ್ಲಿರುವ ಬ್ಯಾಂಕಿಗೆ ತಮ್ಮ ಬಳಿ ಇದ್ದ ಸುಮಾರು 75 ಸಾವಿರ ರು. ಹಳೆಯ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಆಗಮಿಸಿದ್ದರು. ಈ ವೇಳೆ ಸುಮಾರು 8 ಗಂಟೆಗಳ ಕಾಲ ಸರತಿ ಸಾಲಲ್ಲಿ ನಿಂತಿದ್ದ ಲಕ್ಷ್ಮೀ ನಾರಾಯಣ ಅವರು ಅತಿಯಾದ ಬಳಲಿಕೆ ಹಾಗೂ ಆಯಾಸದಿಂದ ಸ್ಥಳದಲ್ಲೇ ಕುಸಿದಿದ್ದಾರೆ. ಆಗ ಅವರ ತಲೆಗೆ ಪೆಟ್ಟಾಗಿದ್ದು, ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣ ಹೋಗಿತ್ತು ಎಂದು ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ಅವರ ಪಾರ್ಥೀವ ಶರೀರವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಟು ನಿಷೇಧದ ಬಳಿಕ ಅದರ ಪರಿಣಾಮಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಸಂಬಂಧಿಸಿದಂತೆ ಉಂಟಾದ ವಿವಿಧ ಘಟನೆಗಳಲ್ಲಿ ಈ ವರೆಗೂ ದೇಶಾದ್ಯಂತ 16 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಓರ್ವ ಮಹಿಳೆ ತಾನು ಜಮೀನು ಮಾರಿದ್ದ ಸುಮಾರು 15 ಲಕ್ಷ ಹಣ ಇನ್ನು ಚಲಾವಣೆಯಾಗುವುದಿಲ್ಲ ಎಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ನೆನಪಿಸಿಕೊಳ್ಳಬಹುದು.

► Follow us on –  Facebook / Twitter  / Google+

Facebook Comments

Sri Raghav

Admin