ಸತ್ತ ನಾಯಿಯನ್ನು ಮನೆಯಲ್ಲಿ ಇಟ್ಟುಕೊಂಡು ಸೃಷ್ಟಿಸಿದಳು ರಾದ್ದಾಂತ..!

ಈ ಸುದ್ದಿಯನ್ನು ಶೇರ್ ಮಾಡಿ

Women-with-Dog

ಮೈಸೂರು, ಫೆ.16-ಸತ್ತ ನಾಯಿಯನ್ನೇ ಮನೆಯಲ್ಲಿಟ್ಟುಕೊಂಡಿರುವುದರಿಂದ ಅಕ್ಕಪಕ್ಕದ ನಿವಾಸಿಗಳು ವಾಸನೆ ತಾಳಲಾರದೆ ದೂರು ನೀಡಿದ್ದರೂ ನಾಯಿಗಳನ್ನು ಸಾಕಿರುವ ಮಹಿಳೆ ಮಾತ್ರ ಸ್ಥಳಕ್ಕೆ ಪಾಲಿಕೆಯವರಾಗಲಿ ಅಥವಾ ಪೊಲೀಸರು ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡುತ್ತ ರಂಪಾಟ ನಡೆಸುತ್ತಿದ್ದಾಳೆ.  ನಗರದ ಉಮಾ ಟಾಕೀಸ್ ರಸ್ತೆಯಲ್ಲಿರುವ ವರಲಕ್ಷ್ಮಿ ಎಂಬಾಕೆ ಮನೆಯಲ್ಲೇ 8 ರಿಂದ 10 ಬೀದಿ ನಾಯಿಗಳನ್ನು ಸಾಕಿಕೊಂಡಿದ್ದು, ಒಂದೆರಡು ದಿನಗಳ ಹಿಂದೆ ಒಂದು ನಾಯಿ ಮೃತಪಟ್ಟಿತ್ತು. ಆದರೆ, ಆ ನಾಯಿಯನ್ನು ತನ್ನ ಮನೆಯ ಬೀರುವಿನಲ್ಲೇ ಇಟ್ಟುಕೊಂಡಿದ್ದು, ಇದರಿಂದ ಆಕೆಯ ಮನೆ ಸೇರಿದಂತೆ ಸುತ್ತಮುತ್ತಲ ಮನೆಗಳಿಗೂ ದುರ್ನಾಥ ವ್ಯಾಪಿಸಿದೆ.

ಇದರ ವಿರುದ್ಧ ನೆರೆಹೊರೆಯವರು ಪಾಲಿಕೆಯವರು ಹಾಗೂ ಪೊಲೀಸರಿಗೆ ದೂರು ನೀಡಿದ್ದು, ಇದನ್ನು ತಿಳಿದ ವರಲಕ್ಷ್ಮಿ ಮನೆ ಮುಂದೆ ರಂಪಾಟ ಆರಂಭಿಸಿದ್ದಾಳೆ. ಅವಾಚ್ಯ ಶಬ್ದಗಳಿಂದ ಎಲ್ಲರನ್ನೂ ನಿಂದಿಸುತ್ತ ಯಾರಾದರೂ ನಾಯಿ ಎಳೆದೊಯ್ಯಲು ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದಾರೆ. ಒಟ್ಟಾರೆ ಬೆಳಗಿನಿಂದ ಸ್ಥಳದಲ್ಲಿ ಈಕೆಯ ಆರ್ಭಟದಿಂದ ಬಿಗುವಿನ ವಾತಾವರಣ ಉಂಟಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin