ಸತ್ಯ ಹೇಳಿದ್ದೇನೆ, ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil-01

ವಿಜಯಪುರ, ಸೆ.13- ನನ್ನ ಕಿವಿಗೆ ಕೇಳಿದ ಸತ್ಯದ ಮಾತುಗಳನ್ನಾಡಿದ್ದೇನೆ. ನಾನು ಸತ್ಯವನ್ನೇ ಹೇಳಿದ್ದೇನೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ ಎಂದು ಸಿದ್ಧಗಂಗಾಶ್ರೀಗಳ ಹೇಳಿಕೆ ಕುರಿತು ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಕೂಡಲ ಸಂಗಮಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಜೀವನದ ಸತ್ವ ಪರೀಕ್ಷೆಯ ಕಾಲ. 12ನೆ ಶತಮಾನದಲ್ಲಿ ಬಸವಣ್ಣನವರಿಗೂ ಸತ್ವ ಪರೀಕ್ಷೆಯಾಗಿತ್ತು. ಇಂದು ನನ್ನ ಸತ್ವ ಪರೀಕ್ಷೆ ನಡೆಯುತ್ತಿದೆ. ನನ್ನ ಕಿವಿಗೆ ಕೇಳಿದ ಸತ್ಯವನ್ನು ಹೇಳಿದ್ದೇನೆ. ಕಾದು ನೋಡುತ್ತೇನೆ ಎಂದು ಪರೋಕ್ಷವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಮಾತನಾಡಿದರು.

ಸಿದ್ಧಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕತೆಗೆ ಬೆಂಬಲಿಸಿದ್ದಾರೆ ಎಂಬ ಹೇಳಿಕೆ ಕುರಿತು ಎದ್ದಿರುವ ವಿವಾದಕ್ಕೆ ಪರೋಕ್ಷ ಹೇಳಿಕೆ ನೀಡಿದ ಅವರು, ನಾನು ಅನಾವಶ್ಯಕವಾಗಿ ಮಾತನಾಡುವುದಿಲ್ಲ. ನಾನು ಹೇಳುವುದಿಷ್ಟೇ. ನಾನು ಕಂಡಿದ್ದು, ನೋಡಿದ್ದನ್ನು, ಕೇಳಿದ್ದನ್ನು ಹೇಳಿದ್ದೇನೆ. ಇದನ್ನು ಬಿಟ್ಟು ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಹೇಳಿದರು.

Facebook Comments

Sri Raghav

Admin