ಸತ್ರ ನ್ಯಾಯಾಧೀಶ ಸತೀಶ್‍ಸಿಂಗರನ್ನು ವರ್ಗಾಹಿಸಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Advocates--Belur

ಬೇಲೂರು, ಆ.26- ಕಾನೂನು ವ್ಯಾಪ್ತಿಯನ್ನು ಮೀರಿ ವೃತ್ತ ನಿರೀಕ್ಷಕ ಮಾರಪ್ಪರನ್ನು ರಕ್ಷಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ.ಸತೀಶ್‍ಸಿಂಗರನ್ನು ತಕ್ಷಣವೇ ವರ್ಗಾಹಿಸ ಬೇಕೆಂದು ಒತ್ತಾಯಿಸಿ ತಾಲೂಕು ವಕೀಲರ ಸಂಘದಿಂದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಜಮೀರ್ ಅಹಮದ್, ಚನ್ನರಾಯಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯವು ವೃತ್ತ ನಿರೀಕ್ಷಕ ಮಾರಪ್ಪರ ವಿರುದ್ದ ನ್ಯಾಯಾಂಗ ಬಂದನಕ್ಕೆ ಆದೇಶ ನೀಡಿತ್ತು, ಮಾರಪ್ಪನವರು ಸುಮಾರು ಪ್ರಕರಣಗಳಲ್ಲಿ ಸಾಕ್ಷಿದಾರರಾಗಿದ್ದರಿಂದ ವಿಚಾರಣೆ ಹಾಜರಾಗಬೇಕಿತ್ತು, ಮಾರಪ್ಪನವರು ಹಾಜರಾಗದ ಕಾರಣ ನ್ಯಾಯಾಲಯವು ವಾರೆಂಟ್ ಮಾಡಿತ್ತು.
ಮಾರಪ್ಪನವರು ಆ.23 ರಂದು ಕೆಲವೊಂದು ಪ್ರಕರಣಗಳಿಗೆ ಮಾತ್ರ ಹಾಜರಾಗುವ ಸಾದ್ಯತೆ ಇದ್ದಿದ್ದರಿಂದ ನ್ಯಾಯಾಂಗ ಬಂದನಕ್ಕೆ ಆದೇಶ ನೀಡಿತ್ತು. ಆದರೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಪೊಲೀಸರು ನ್ಯಾಯಾಧೀಶರಿಗೆ ದಿಗ್ಬಂಧನ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾನೂನಿಗೆ ವಿರುದ್ದವಾಗಿ ನಡೆದು ಕೊಂಡಿದ್ದರೂ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜೆ.ಸಿಂಗ್‍ರವರು ಆರೋಪಿಯನ್ನು ರಕ್ಷಿಸಿದ ಕ್ರಮ ಸರಿಯಲ್ಲ, ಆದ್ದರಿಂದ ಇಂತಹ ನ್ಯಾಯಾಧೀಶರನ್ನು ಇಲ್ಲಿಂದ ತಕ್ಷಣವೇ ವರ್ಗಾಹಿಸಬೇಕು ಎಂದು ಒತ್ತಾಯಿಸಿ 3 ದಿನಗಳ ಕಾಲ ನ್ಯಾಯಾಲಯದ ಕಲಾಪವನ್ನು ಭಹಿಸ್ಕರಿಸಿದ್ದೇವೆ ಎಂದು ತಿಳಿಸಿದರು.ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಸ್.ಜಿ ಸ್ವಾಮಿ, ಕಾರ್ಯದರ್ಶಿ ಸಿದ್ದೇಗೌಡ, ಜಂಟಿ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಖಜಾಂಚಿ ಸುನೀಲ್‍ಕುಮಾರ್, ವಕೀಲರಾದ ವೈ.ಸಿ.ಮೋಹನ್‍ಕುಮಾರ್, ಪೃತ್ವಿ, ಕುಮಾರ್, ರವಿ ಇನ್ನಿತರೆ ವಕೀಲರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin