ಸದನಕ್ಕೆ ಹಕ್ಕುಚ್ಯುತಿ ಆರೋಪ : ಒಂದು ವಾರ ಕಾಲ ಡಿಎಂಕೆ ಶಾಸಕರ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

DMK

ಚೆನ್ನೈ,ಆ.18-ತಮಿಳುನಾಡು ವಿಧಾನಸಭೆಯಲ್ಲಿ ಸದನಕ್ಕೆ ಹಕ್ಕುಚ್ಯುತಿ ತಂದ ಆರೋಪದ ಮೇಲೆ ಸ್ಪೀಕರ್ ಪಿ.ಧನಪಾಲ್ ಅವರು ವಿರೋಧ ಪಕ್ಷ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಸೇರಿದಂತೆ ಎಲ್ಲ ಶಾಸಕರನ್ನು ಒಂದು ವಾರ ಕಾಲ ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ವಿಧಾನಸಭೆಗೆ ಪ್ರವೇಶ ನೀಡಲು ನಿರಾಕರಿಸಿದ್ದ ಪೊಲೀಸರ ಜೊತೆ ಎಂ.ಕೆ.ಸ್ಟಾಲಿನ್ ವಾಗ್ವಾದಕ್ಕಿಳಿದರು.   ಪ್ರವೇಶಕ್ಕೆ ಅವಕಾಶ ನೀಡದ ಪೊಲೀಸರ ವಿರುದ್ಧ ಗರಂ ಆದ ಸ್ಟಾಲಿನ್ ಒಳಗೆ ಬಿಡುವಂತೆ ಒತ್ತಾಯಿಸಿದರು. ಈ ಮಧ್ಯೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಶಾಸಕರು ವಿಧಾನಸಭೆ ಹೊರಗೆ ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿ ಜಯಲಲಿತ ಹಾಗೂ ಸ್ಪೀಕರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.  ಈ ಬಗ್ಗೆ ಮಾತನಾಡಿದ ಅವರು, ವಿನಾಕಾರಣ ನಮ್ಮನ್ನು ಅಮಾನತು ಮಾಡಿದ್ದಾರೆ. ಇದನ್ನು ರದ್ದು ಮಾಡಬೇಕೆಂದು ಗುಡುಗಿದರು.

ಎಐಡಿಎಂಕೆ ಶಾಸಕರೊಬ್ಬರು ನಿನ್ನೆ ಸದನದಲ್ಲಿ ಮಾತನಾಡುವಾಗ ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಅವರ ಹೆಸರು ಹೇಳದೆ ಅಪಹಾಸ್ಯ ಮಾಡಿದ್ದನ್ನು ಖಂಡಿಸಿ ಡಿಎಂಕೆ ಶಾಸಕರು ಧರಣಿ ನಡೆಸಿ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಸಿದ್ದರು. ಹೀಗಾಗಿ ಸ್ಪೀಕರ್ ಪಿ.ಧನಪಾಲ್ ಸದನದ ಹಕ್ಕುಚ್ಯುತಿ ಆರೋಪದ ಮೇಲೆ ಡಿಎಂಕೆಯ ಎಲ್ಲ 89 ಶಾಸಕರಿಗೆ ಒಂದು ವಾರ ಕಾಲ ಅಮಾನತು ಮಾಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin

Comments are closed.