ಸದನದಲ್ಲಿ ಮೊಬೈಲ್ ಬಳಕೆ ಕುರಿತಂತೆ ಸ್ಪೀಕರ್ ಬಳಿ ಅನುರಾಗ್ ಠಾಕೂರ್ ವಿಷಾದ

ಈ ಸುದ್ದಿಯನ್ನು ಶೇರ್ ಮಾಡಿ

anurag-thakur

ನವದೆಹಲಿ,ಜು.26-ಲೋಕಸಭೆ ಸದನದಲ್ಲಿ ಮೊಬೈಲ್ ಬಳಸಿದ್ದರಿಂದ ಬಹಿಷ್ಕರಕ್ಕೆ ಒಳಗಾಗಿದ್ದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಇಂದು ಸ್ಪೀಕರ್ ಸುಮಿತ್ರ ಮಹಾಜನ್ ಅವರ ಬಳಿ ವಿಷಾದ ವ್ಯಕ್ತಪಡಿಸಿದ್ದಾರೆ.  ಲೋಕಸಭೆಯಲ್ಲಿ ಮೊಬೈಲ್ ಬಳಕೆ ಮಾಡಿದ ಆರೋಪದ ಮೇಲೆ ವಿರೋಧ ಪಕ್ಷದ ಕೆಲವು ಸದಸ್ಯರನ್ನು ಸ್ಪೀಕರ್ ಸುಮಿತ್ರ ಮಹಾಜನ್ ಕೆಲವು ದಿನಗಳ ಮಟ್ಟಿಗೆ ಬಹಿಷ್ಕರಿಸಿದ್ದರು.ಈ ನಿಲುವನ್ನು ವಿರೋಧಿಸಿ ಅವರು ಲೋಕಸಭೆಯಲ್ಲಿ ಪ್ರತಿಭಟನೆ ಮಾಡುವ ವೇಳೆ ಅನುರಾಗ್ ಠಾಕೂರ್ ತಮ್ಮ ಮೊಬೈಲ್‍ನಿಂದ ವಿಡಿಯೋ ಸೆರೆ ಹಿಡಿದಿದ್ದರು. ಈ ಕುರಿತು ಎಎಪಿ ಸಂಸದ ಭಗವಂತ್ ಮನ್ನ್ ಅವರು ಸ್ಪೀಕರ್ ಸುಮಿತ್ರ ಮಹಾಜನ್ ಅವರಿಗೆ ಪತ್ರ ಬರೆದಿದ್ದರು.ಈ ಹಿನ್ನಲೆಯಲ್ಲಿ ಅನುರಾಗ್ ಠಾಕೂರ್ ಸ್ಪೀಕರ್ ಬಳಿ ಮೊಬೈಲ್ ಬಳಸಿದ್ದ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin