ಸದ್ಗುರು ಕಾಯಕಶ್ರೀ ಶೈಕ್ಷಣಿಕ ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

14

ಬೆಳಗಾವಿ,ಅ.5- ವಿಜಯನಗರದ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಪ್ರತಿವರ್ಷ ನೀಡಲಾಗುತ್ತಿರುವ ಸದ್ಗುರು ಕಾಯಕ ಶ್ರೀ ಪ್ರಶಸ್ತಿ 2016ರ ಸಾಲಿಗೆ ಶೈಕ್ಷಣಿಕ ರಂಗದ ಸಾಧಕರಿಗೆ ಪ್ರಧಾನ ಮಾಡಲಾಯಿತು.ಬೆನ್ನಾಳಿಯ ಪ್ರಧಾನಗುರು ವಿಜಯ ಮೋಡಕ, ಮಂಡೋಳಿಯ ದೈಹಿಕ ಶಿಕ್ಷಣ ಶಿಕ್ಷಕ ನಾಗೇಂದ್ರ ನಾರಾಯಣ ಕಾತಕರ, ಹಿಂಡಲಗಾದ ಶಿಕ್ಷಕ ಶಶಿಕಾಂತ ಅಮೃತರಾವ ಜಾಧವ, ಹೊಸವಂಟಮುರಿಯ ಶಿಕ್ಷಕಿ ಆರ್.ಎಂ. ಮುಶೆಣ್ಣವರ, ಗೋಂದಳಿ ತೋಟದ ಶಿಕ್ಷಕ ಸಿದ್ದು ಅಡಿವೆಪ್ಪ ಇಟಿಗಿ, ಹುಮಾನ ನಗರದ ದೈಹಿಕ ಶಿಕ್ಷಣ ಶಿಕ್ಷಕಿ ಮಾಲನ ಮಾಳವದೆ, ಹಂಗರಗಾ ಶಾಲೆಯ ಶಿಕ್ಷಕ ವಿಠ್ಠಲ ಮೋಡಕ ಗೋಜಗಾ ಶಾಲೆಯ ಪ್ರಧಾನ ಗುರುಮಾತೆ ವಿಜಯಾ ರಾಮಚಂದ್ರ ನಾಯಕ, ಮುಚ್ಚಂಡಿ

ಸಿ.ಆರ್.ಪಿ, ರುದ್ರಯ್ಯ ಈರಯ್ಯಾ ಮೇಟ್ಯಾಲಮಠ, ಮಣ್ಣೂರಿನ ಶಿಕ್ಷಕ ಸುರೇಶ ಬಸಲಿಂಗಪ್ಪ ಫಡೇಣ್ಣವರ, ಶಿಕ್ಷಕರಾದ ಶ್ರೀಶೈಲ ಜಂಬಗಿ, ಎಸ್.ಡಿ. ಕಾತ್ರಾಳ ಅವರನ್ನು ಪ್ರಶಸ್ತಿ ನೀಡಿ ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಪುಸ್ತಕಗಳನ್ನು ನೀಡಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನಗರದ ಕನ್ನಡಸಾಹಿತ್ಯ ಭವನದಲ್ಲಿ ಸನ್ಮಾನಿಸಿ ಅವರ ಶೈಕ್ಷಣಿಕ ಕಾರ್ಯಗಳಿಗೆ ಶುಭ ಕೋರಿದರು. ಜೊತೆಗೆ 2015ರ ಸಾಲಿನ ರಾಷ್ಟ್ರಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿರುವ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಶಿಕ್ಷಕ ನೀಲಪ್ಪ ಗೊರವರರನ್ನು ವಿಶೇಷವಾಗಿ ಅಭಿನಂದಿಸಿ ಅವರಿಗೆ ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಪುಸ್ತಕಗಳನ್ನು ನೀಡಿ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸುಣಗಾರ ಸನ್ಮಾನಿಸಿ ಅಭಿನಂದಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin