ಸದ್ದು ಮಾಡಿದೆ ನಾಯಿಗಾಗಿ ಅನುಷ್ಕಾ ಹಾಡಿದ ಹಾಡು

ಈ ಸುದ್ದಿಯನ್ನು ಶೇರ್ ಮಾಡಿ

Anushka

ಬಾಲಿವುಡ್‍ನಲ್ಲಿ ಈಗ ಬಹು ನಿರೀಕ್ಷಿತ ಮತ್ತು ವಿವಾದಿತ ಆಯೆ ದಿಲ್ ಹೈ ಮುಷ್ಕಿಲ್ ಸಿನಿಮಾದ್ದೇ ಚರ್ಚೆ. ಈ ಸಿನಿಮಾದ ಹಾಡು-ಸಂಗೀತ ಈಗಾಗಲೇ ಸಿನಿ ಪ್ರಿಯರ ನಾಲಿಗೆ ಮೇಲೆ ಹರಿದಾಡುತ್ತಿದೆ. ಟೈಟಲ್ ಟ್ರ್ಯಾಕ್‍ನಿಂದ ಕ್ಯೂಟೀಪೀ ಹಾಡು ಜನಪ್ರಿಯವಾಗಿವೆ. ಈ ಸಾಲುಗಳ ಪೀಠಿಕೆಗೆ ಕಾರಣವೂ ಇದೆ. ಬಾಲಿವುಡ್‍ನ ಭರವಸೆಯ ತಾರೆ ಅನುಷ್ಕಾ ಶರ್ಮ ಶ್ವಾನಪ್ರೇಮಿ. ಬಿ-ಟೌನ್ ತಾರೆಯರಂತೆ ಈಕೆ ಕೂಡ ಪ್ರಾಣಿಪ್ರಿಯೆ. ಬುಲ್ಲೆಯಾ ಹಾಡನ್ನು ತನ್ನ ಅಚ್ಚುಮೆಚ್ಚಿನ ಶ್ವಾನ-ಡ್ಯೂಡ್‍ಗಾಗಿ ಅನುಷ್ಕಾ ಹಾಡಿರುವ ಹಾಡಿನ ವಿಡಿಯೋ ನಿನ್ನೆ ತಾನೇ ಬಿಡುಗಡೆಯಾಗಿದ್ದು, ಸಂಚಲನ ಮೂಡಿಸಿದೆ.

ಈ ಬೆಡಗಿ ಹಾಡುತ್ತಿರುವ ಗೀತೆಯನ್ನು ಡ್ಯೂಡ್ ಕುತೂಹಲದಿಂದ ವೀಕ್ಷಿಸುವ ದೃಶ್ಯ ಆಕೆಯ ಅಭಿಮಾನಿಗಳು ಮತ್ತು ಪ್ರಾಣಿಪ್ರಿಯರಲ್ಲಿ ರೋಮಾಂಚನ ಉಂಟು ಮಾಡಿದೆ. ಇನ್ನು ಈ ವಿಡಿಯೋದ ಅತ್ಯುತ್ತಮ ಭಾಗ ಎಂದರೆ ಕ್ಲೈಮ್ಯಾಕ್ಸ್. ತನಗಾಗಿ ಹಾಡು ಹೇಳಿದ ಅನುಗೆ ಡ್ಯೂಡ್ ಕಿಸ್ ಮಾ ಡುವ ದೃಶ್ಯ ಸಂಚ ಲನ ಮೂಡಿ ಸು ತ್ತದೆ. ಈ ಆಕರ್ಷಕ ವಿಡಿ ಯೋಗೆ ಅನು ನೀಡಿರುವ ಆಕರ್ಷಕ ಶೀರ್ಷಿಕೆ ಹೀಗಿದೆ -ಇದು ಎಡಿ ಎಚ್‍ಎಂ (ಆಯೆ ದಿಲ್ ಹೈ ಮು ಷ್ಕಿಲ್) ಸಂಗೀತ ಹೊಸ ಅಭಿ ಮಾನಿ.

 

► Follow us on –  Facebook / Twitter  / Google+

Facebook Comments

Sri Raghav

Admin