ಸದ್ಭಾವನೆಯ ಹೆಜ್ಜೆಯಿಟ್ಟ ಭಾರತ : ಪಾಕ್ 39 ಕೈದಿಗಳ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ನವದೆಹಲಿ, ಫೆ.28-ಪಾಕಿಸ್ತಾನದೊಂದಿಗೆ ಬಾಂಧವ್ಯ ಬಲವರ್ಧನೆಗೊಳಿಸುವ ಸದ್ಭಾವನೆ ಕ್ರಮವಾಗಿ ಭಾರತವು 39 ಪಾಕ್ ಕೈದಿಗಳನ್ನು ಬಿಡುಗಡೆಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ವಿವಿಧ ಜೈಲುಗಳಲ್ಲಿರುವ ಇವರಲ್ಲಿ 21 ಕೈದಿಗಳು ತಮ್ಮ ಶಿಕ್ಷೆಯ ಅವಧಿ ಪೂರ್ಣಗೊಳಿಸಿದ್ದು, 18 ಬೆಸ್ತರು ಸಜೆಯಲ್ಲಿದ್ದಾರೆ.   ಪಾಕಿಸ್ತಾನಿ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಸರ್ಜಿಕಲ್ ದಾಳಿ ಸಂದರ್ಭದಲ್ಲಿ ಪಾಕ್ ಯೋಧರಿಗೆ ಸಿಕ್ಕಿಬಿದ್ದಿದ್ದ ಭಾರತೀಯ ಯೋಧ ಬಾಬುಲಾಲ್ ಚವಾಣ್‍ರನ್ನು ಇಸ್ಲಾಮಾಬಾದ್ ಬಿಡುಗಡೆಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತದ ಜೈಲುಗಳಲ್ಲಿರುವ ಪಾಕಿಸ್ತಾನದ ಕೈದಿಗಳನ್ನು ಭಾರತವು ಬಿಡುಗಡೆಗೊಳಿಸುತ್ತದೆ ಎಂಬ ವಿಸ್ವಾಸವನ್ನು ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸಿತ್ ವ್ಯಕ್ತಪಡಿಸಿದ್ದರು. ಈ ಹಿಂದೆ ಪಾಕಿಸ್ತಾನವು 215 ಭಾರತೀಯ ಕೈದಿಗಳನ್ನು ತನ್ನ ದೇಶದಿಂದ ಭಾರತಕ್ಕೆ ಹಸ್ತಾಂತರಿಸಿತ್ತು.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದ್ಭಾವನೆ ನಡವಳಿಕೆಯ ಹಿನ್ನೆಲೆಯಲ್ಲಿ ಭಾರತ ಇದೀಗ 39 ಪಾಕ್ ಕೈದಿಗಳನ್ನು ಬಿಡುಗಡೆ ಮಾಡಿ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಹೊಸ ಮುನ್ನುಡಿಗೆ ನಾಂದಿ ಹಾಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin