ಸದ್ಯದಲ್ಲೇ ಚಲಾವಣೆಗೆ ಬರುತ್ತಿವೆ 20 ಹಾಗೂ 50 ರೂ. ಮುಖಬೆಲೆಯ ಹೊಸ ನೋಟುಗಳು

ಈ ಸುದ್ದಿಯನ್ನು ಶೇರ್ ಮಾಡಿ

50-Notes

ನವದೆಹಲಿ ಡಿ.04 : ದೇಶದಲ್ಲಿ ನೋಟ್ ಬ್ಯಾನ್ ನಿಂದಾಗಿ ಚಿಲ್ಲರೆ ಹಣಕ್ಕೆ ಜನ ಪರದಾಡುತ್ತಿರುವಾಗ ಇಲ್ಲೊಂದು ಸಣ್ಣ ಸಿಹಿ ಸುದ್ದಿ ಬಂದಿದೆ. ಜನರ ಸಂಕಷ್ಟ ನೀಗಿಸಲು ಸದ್ಯದಲ್ಲೇ 20 ಮತ್ತು 50 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರುತ್ತಿವೆ.   ಕಳೆದ ನವೆಂಬರ್ 8 ರಂದು, 500 ಹಾಗೂ 1000 ರೂ. ಮುಖಬೆಲೆಯ ನೋಟ್ ಗಳ ಚಲಾವಣೆ ರದ್ದುಪಡಿಸಿದ ಬಳಿಕ, ಹೊಸ 2000 ರೂ. ಮುಖಬೆಲೆಯ ನೋಟ್ ಚಲಾವಣೆಗೆ ತರಲಾಗಿದೆ. ದೇಶದಲ್ಲಿ ನಗದು ಕೊರತೆ ಮತ್ತು ಚಿಲ್ಲರೆ ಸಮಸ್ಯೆ ಎದುರಾಗಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಹೊಸದಾಗಿ 50 ರೂ. ಹಾಗೂ 20 ರೂ ನೋಟ್ ಗಳನ್ನು ಚಲಾವಣೆಗೆ ತರಲಿದೆ.

20 ರೂ. ನೋಟ್ ಗಳು ಎಲ್ ಸರಣಿಯಲ್ಲಿ ಹೊರ ಬರಲಿದ್ದು, ಮುದ್ರಣ ವರ್ಷವನ್ನು ನಮೂದಿಸಲಾಗುತ್ತದೆ. ಹೊಸ 50 ರೂ. ಹಾಗೂ 20 ರೂ.  ಟುಗಳೊಂದಿಗೆ ಹಳೆಯ ನೋಟುಗಳು ಸಹ ಚಲಾವಣೆಯಲ್ಲಿರುತ್ತವೆ ಎಂದು ಆರ್.ಬಿ.ಐ. ಗೌರ್ನರ್ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ. ಹೊಸ ವಿನ್ಯಾಸದೊಂದಿಗೆ ಎರಡು ನೋಟುಗಳೂ ಬಿಡುಗಡೆಯಾಗಲಿವೆ. ಇದನ್ನು ಹೆಚ್ಚು ಬಿಡುಗಡೆ ಮಾಡುವುದರಿಂದಲೂ ನೋಟು ಸಮಸ್ಯೆ ಕಡಿಮೆಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin