ಸದ್ಯದಲ್ಲೇ ಮಹಿಳಾ-ಮಕ್ಕಳ ಮೇಲಿನ ದೌರ್ಜನ್ಯ ಕುರಿತು ವರದಿ ಸಲ್ಲಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ugrappa--02

ಬೆಂಗಳೂರು,ಫೆ.28-ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ , ಶೋಷಣೆ, ಅತ್ಯಾಚಾರ ನಿಯಂತ್ರಿಸುವ ಕುರಿತಂತೆ ರಚಿಸಲಾಗಿದ್ದ ಸಮಿತಿಯ ವರದಿ ಸಿದ್ದವಾಗಿದ್ದು , ಸದ್ಯದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಇಂದಿಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 198 ವಿವಿಧ ಪ್ರಕರಣಗಳನ್ನು ಶಿಫಾರಸ್ಸು ಮಾಡಿದ್ದು 2015ರಲ್ಲಿ ಈ ಸಂಬಂಧ ಮಧ್ಯಂತರ ವರದಿ ನೀಡಲಾಗಿತ್ತು. ಅಂತಿಮ ವರದಿಯ ಕರಡು ಪ್ರತಿ ಇದೀಗ ಸಿದ್ಧವಾಗಿದ್ದು , ಮುಂದಿನ 10 ದಿನಗಳಲ್ಲಿ ಸಲ್ಲಿಸಲಾಗುವುದು ಎಂದರು.

ಸಮಿತಿ ಎಂ.ಸಿ.ನಾಣಯ್ಯ ಅವರ ನೇತೃತ್ವದಲ್ಲಿ ಮೊದಲನೇ ಅವಧಿಯಲ್ಲಿ 39 ಸಭೆಗಳನ್ನು ನಡೆಸಿದ್ದು , ತಮ್ಮ ಅವಧಿಯಲ್ಲಿ 134 ಸಭೆಗಳನ್ನು ನಡೆಸಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಬೆಂಗಳೂರು ನಗರದ 25 ಪ್ರಕರಣಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಪ್ರಕರಣಗಳು ಪರಿಶೀಲನೆ ನಡೆಸಲಾಗಿದೆ ಎಂದರು.
198 ವಿವಿಧ ಪ್ರಕರಣಗಳ ಶಿಫಾರಸ್ಸು ಮಾಡಲಾಗಿದ್ದು, 2015ರಲ್ಲಿ ಮಧ್ಯಂತರ ವರದಿ ನೀಡಲಾಗಿದ್ದು , ಅಂತಿಮ ವರದಿಯ ಕರಡು ಪ್ರತಿ ಮುದ್ರಿಸಿ ನೀಡಲಾಗುವುದು ಎಂದರು.  100ಕ್ಕೂ ಹೆಚ್ಚು ಶಿಫಾರಸ್ಸುಗಳಲ್ಲಿ ಪ್ರಮುಖವಾದವು ದೌರ್ಜನ್ಯ, ಅತ್ಯಾಚಾರ ಸಂಬಂಧಿಸಿದ್ದಾಗಿದ್ದು , ಜನಜಾಗೃತಿ ಕುರಿತಂತೆಯೂ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿದರು.

Facebook Comments

Sri Raghav

Admin