ಸದ್ಯದಲ್ಲೇ ಸ್ವಲ್ಪಬದಲಾವಣೆಗಳೊಂದಿಗೆ ಚಲಾವಣೆಗೆ ಬರಲಿದೆ 100 ರೂ. ಮುಖಬೆಲೆಯ ಹೊಸ ನೋಟು

ಈ ಸುದ್ದಿಯನ್ನು ಶೇರ್ ಮಾಡಿ

Rs100

ಮುಂಬೈ.ಡಿ. 07 : 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬಳಿಕ  ಆರ್.ಬಿ.ಐ. ಈಗ 100 ರೂ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದ್ದು, ಎರಡೂ ಬದಿಯ ಬದಲಾವಣೆಯೊಂದಿಗೆ ಹೊಸ ರೂಪದಲ್ಲಿ 100 ರೂ. ನೋಟು ಚಲಾವಣೆಗೆ ಬರಲಿದೆ. ಮಹಾತ್ಮ ಗಾಂಧೀಜಿ ಸರಣಿ-2005 ರ ಅಡಿಯಲ್ಲಿ ನೋಟುಗಳನ್ನು ಮುದ್ರಿಸಿದ್ದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಹಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಳೆಯ ನೋಟುಗಳು ಎಂದಿನಂತೆ ಚಲಾವಣೆಯಲ್ಲಿರುತ್ತದೆ. ಈ ನೋಟುಗಳಲ್ಲಿ ಸಂಖ್ಯೆಗಳ ಗಾತ್ರ ಏರಿಕೆ ಕ್ರಮದಲ್ಲಿದ್ದು, ಗುರುತಿನ ಚಿಹ್ನೆಯನ್ನು ವಿಸ್ತರಿಸಲಾಗಿರುತ್ತದೆ. ಬ್ಲೀಡ್ ಲೈನ್ ಗಳು ಹಾಗೂ ಗುರುತಿನ ಚಿಹ್ನೆಗಳನ್ನು ವಿಸ್ತರಣೆ ಮಾಡದಿರುವ ಕೆಲವು ನೋಟುಗಳನ್ನು ಸಹ ಆರ್ ಬಿಐ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಹೊಸ 500 ರೂ. ಮತ್ತು 2000 ರೂ. ನೋಟುಗಳನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಈಗಾಗಲೇ ಚಲಾವಣೆಯಲ್ಲಿರುವ 20 ರೂ. ಹಾಗೂ 50 ರೂ. ನೋಟುಗಳೊಂದಿಗೆ ಹೊಸ 20 ರೂ. ಹಾಗೂ 50 ರೂ. ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಆರ್.ಬಿ.ಐ. ಈಗಾಗಲೇ ತಿಳಿಸಿದೆ. ಚಿಲ್ಲರೆ ಕೊರತೆ ಎದುರಾಗಿರುವುದರಿಂದ ಹೊಸ 100 ರೂ. ನೋಟು ಮುದ್ರಿಸಲಾಗುತ್ತಿದೆ ಎಂದು ಹೇಳಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin