ಸನಾತನ ಸಂಸ್ಥೆ ನಿಷೇಧದ ಬೇಡಿಕೆ ಸಲ್ಲದು : ಮುತಾಲಿಕ್

ಈ ಸುದ್ದಿಯನ್ನು ಶೇರ್ ಮಾಡಿ

BELAGAM-8

ಹುಬ್ಬಳ್ಳಿ,ಅ.30- ಸನಾತನ ಸಂಸ್ಥೆ ದೇಶದ ರಕ್ಷಣೆ, ಧರ್ಮ ಜಾಗೃತಿ, ಅಂಧ ಶ್ರದ್ಧೆ ನಿರಾಕರಣೆ, ಸಮಾಜ ಸಹಾಯ, ಅಧ್ಮಾತ್ಮಗಳ ಹೂರಣವಾಗಿದ್ದು, ಕೆಲವರ ಕೀಳುಮಟ್ಟದ ಪ್ರಚಾರಕ್ಕಾಗಿ ಇಂತಹ ಹೆಮ್ಮೆಯ ಸಂಸ್ಥೆಯನ್ನು ನಿಷೇಧಿಸಬೇಕೆಂಬ ಬೇಡಿಕೆ ಸಲ್ಲದು. ಇದು ಸಂಸ್ಥೆಯ ನಿಷೇಧವಲ್ಲ ಭಾರತೀಯ ಧರ್ಮದ ನಿಷೇಧವಾಗಿದೆ ಎಂದು ಶ್ರೀರಾಮ ಸೇನಾ ನಾಯಕ ಪ್ರಮೋದ ಮುತಾಲಿಕ ಹೇಳಿದರು.  ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಸಂಸ್ಥೆಯು ಪ್ರಕಾಶಿಸಿದ ಲಕ್ಷಾಂತರ ಗ್ರಂಥಗಳನ್ನು ಓದಿ, ಸಮಾಜದಲ್ಲಿ ಣಯತಿಕ ಮೌಲ್ಯಗಳ ಸಂವರ್ಧನೆಯಾಗುತ್ತಿದೆ. ಬುದ್ಧಿ ಜೀವಿಗಳು, ಹಿಂದೂ ವಿರೋಧಿ ರಾಜಕೀಯ ನೇತಾರರು, ನಿಖರವಾದ ಸಾಕ್ಷಿ ಮತ್ತು ಆಧಾರಗಳಿಲ್ಲದೆ ಡಾ. ನರೇಂದ್ರ ದಾಬೋಲ್ಕರ್, ಕಾ. ಗೋವಿಂದ್ ಪಾನ್ಸರೆ ಮತ್ತು ಎಂ.ಎಂ. ಕಲಬುರ್ಗಿ ಹತ್ಯೆಯ ಆರೋಪವನ್ನು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ದೂರಿದರು.
ಸನಾತನ ಸಂಸ್ಥೆಯ ವಿರುದ್ಧ ನಕಲಿ ಸಾಕ್ಷಿ ಸಂಜಯ ಸಾಡವಿಲ್ಕರನನ್ನು ತಯಾರಿಸಲಾಗಿದೆ. ಈತ ಕೊಲ್ಲಾಪುರ ಅಂಬಾದೇವಿ ದೇವಸ್ಥಾನದ ಬೆಳ್ಳಿ ರಥದ ನಿರ್ಮಾಣದಲ್ಲಿ ಭ್ರಷ್ಟಾಚಾರ ಮಾಡಿದ ಆರೋಪವಿದೆ. ಈತ ಪ್ರಥಮವಾಗಿ ಈ ಸಂಸ್ಥೆಯ ವಿರೋಧಿಯಾಗಿದ್ದಾನೆ. ಹಲವರು ಹೆಣೆದ ಬಲೆಯಲ್ಲಿ ಸಾಧಕ ಸಮೀರ ಗಾಯಕವಾಡ ಅವರನ್ನು ಸಿಲುಕಿಸಲು ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ಸಿಬಿಐ ತನಿಖೆಯನ್ನು ನಂದಕುಮಾರ ನಾಯರ ಎಂಬ ಕಳಂಕಿತ ವ್ಯಕ್ತಿಗೆ ನೀಡಿದ್ದು, ನ್ಯಾಯಾಲಯಕ್ಕೆ ನೀಡುವ ಮೊದಲೆ ಸಾಕ್ಷಿ ಮತ್ತು ಮಾಹಿತಿಯನ್ನು ಮಾಧ್ಯಗಳ ಮುಂದೆ ಬಿಡುಗಡೆ ಮಾಡುತ್ತಿರುವ ಕುರಿತು ಮುಂಬೈ ಉಚ್ಛನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಐಸ್‍ಐಸ್ ಭಯೋತ್ಪಧನೆಗೆ ನೇರ ಬೆಂಬಲ ನೀಡುತ್ತಿರುವ ಎಮ್‍ಐಎಂ ಪಾರ್ಟಿಯನ್ನಾಗಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರಾರು ಸ್ವಯಂ ಸೇವಕರನ್ನು ಹತ್ಯೆ ಮಾಡಿದ

 

ಸಾಮ್ಯವಾದಿ ಪಕ್ಷವನ್ನಾಗಲಿ ನಿಷೇಧಿಸುವ ಬಗ್ಗೆ ಯಾರು ಚಕಾರ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸನಾತನ ಸಂಸ್ಥೆಯ ಮೇಲಿ ಆರೋಪವನ್ನು ಸಂಘಟನೆ ಬಲವಾಗಿ ಖಂಡಿಸುತ್ತದೆ. ಮತ್ತು ಯಾವುದೇ ರಾಜಕೀಯ ನೇತಾರರ ಒತ್ತಡಕ್ಕೆ ಮಣಿದು ಸಂಸ್ಥೆಯ ಮೇಲೆ ನಿಷೇಧಿಸಲು ಮುಂದಾಗಬಾರದು ಎಂದು ಆಗ್ರಹಿಸಿದರು.
ಶ್ರೀರಾಮ ಸೇನೆಯ ದಯಾನಂದ ರಾವ್, ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ, ಸನಾತನ ಸಂಸ್ಥೆಯ ಕುಬೇರಗೌಡ ಕಲ್ಲನಗೌಡರ್ ಸೇರಿದಂತೆ ಮತಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin