ಸಪ್ತಸಾಗರದಾಚೆ ಕನ್ನಡಿಗರ ಕಲರವ

ಈ ಸುದ್ದಿಯನ್ನು ಶೇರ್ ಮಾಡಿ

Akka-02

ನ್ಯೂಜೆರ್ಸಿ, ಸೆ.4- ಕನ್ನಡ ನಾಡಿನ ಸಂಸ್ಕೃತಿ , ಪರಂಪರೆ, ಕಲೆಗಳನ್ನು ಸಾರುವ ಸಾಹಿತ್ಯ, ಜಾತ್ರೆ ಪೂರ್ವ ಅಮೆರಿಕದ ಲಾಸ್‍ವೇಗಾಸ್ ಖ್ಯಾತಿಯ ಅಟ್ಲಾಂಟಿಕ್ ಸಿಟಿಯಲ್ಲಿ ಮೇಳೈಸಿದ ಪರಿ ಕನ್ನಡದ ಮನಸುಗಳನ್ನು ಸೂರೆಗೊಂಡಿತು.  9ನೆ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಒಗ್ಗೂಡಿದ ಕನ್ನಡ ಮನಗಳು ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದವು. 6 ಸಾವಿರಕ್ಕೂ ಹೆಚ್ಚು ಕನ್ನಡಿಗರೇ ತುಂಬಿದ್ದ ಸಮ್ಮೇಳನದಲ್ಲಿ ಎಲ್ಲೆಡೆ ಕನ್ನಡದ ಕಲರವ ಕೇಳಿಬಂತು.  ಅಮೆರಿಕದ ವಿವಿಧ ರಾಜ್ಯಗಳು, ಕೆನಡಾ ಮತ್ತು ಭಾರತ ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಿದ್ದು, ವಿಶೇಷವಾಗಿತ್ತು.  ತಾಯಿ ಭುವನೇಶ್ವರಿಯ ಮೆರವಣಿಗೆ, ಜಯಘೋಷ, ಹಾಡು, ಕುಣಿತ, ಸಂಭ್ರಮದ ಉತ್ಸವ, ಪ್ರಸಿದ್ಧ ಕಲಾವಿದರು, ಸಿನಿ ತಾರೆಯರ ದಂಡು, ಕಲಾಪ್ರದರ್ಶನ, ಧಾರ್ಮಿಕ ಕ್ಷೇತ್ರದ ದಿಗ್ಗಜರು, ಸಾಹಿತಿಗಳು, ಕನ್ನಡಪರ ಸಂಘ ಸಂಸ್ಥೆಗಳ ಮುಖಂಡರು ಒಗ್ಗೂಡಿ ನಡೆಸಿದ ಸಮ್ಮೇಳನದಲ್ಲಿ ಕನ್ನಡತನವೇ ಕಂಗೊಳಿಸಿತು.

ಕನ್ನಡ ಕುಲ ಉಳಿಯಲು ಕನ್ನಡ ಭಾಷೆಗೆ ಆದ್ಯತೆ ನೀಡಬೇಕಿದೆ. ಜೀವನ, ಸಂಸ್ಕøತಿ ಪರಿಚಯಿಸುವ ಕನ್ನಡತನವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎಂಬ ಅಭಿಪ್ರಾಯ ಸಮ್ಮೇಳನದಲ್ಲಿ ಪ್ರತಿಧ್ವನಿಸಿತು.  ಕನ್ನಡದ ಸಾಹಿತ್ಯ, ಸಂಸ್ಕøತಿಯ ಬಗ್ಗೆ ನಮ್ಮ ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಉತ್ತಮ ನಾಗರಿಕತೆಯನ್ನು ಅವರಿಗೆ ತಿಳಿಸಿಕೊಡಲು ಸಾಧ್ಯ. ಹಾಗಾಗಿ ಅಮೆರಿಕ ಅಥವಾ ಯಾವುದೇ ದೇಶದಲ್ಲಿ ನೆಲೆಸಿರುವ ಕನ್ನಡಿಗರು ಮಕ್ಕಳಿಗೆ ಬಾಲ್ಯದಿಂದಲೇ ಸರಿಯಾಗಿ ಕನ್ನಡ ಕಲಿಸಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಿದೇಶಿ ಮಕ್ಕಳಿಗೆ ಕನ್ನಡ ಭಾಷೆ, ಸಾಹಿತ್ಯ, ಕಲೆ, ಪರಂಪರೆಯನ್ನು ತಿಳಿಸಿಕೊಡಲು ಆನ್‍ಲೈನ್ ಮೂಲಕ ಶಿಕ್ಷಣ ನೀಡಲು ಮುಂದಾಗಿದೆ. ಈ ವಿಚಾರದಲ್ಲಿ ಯಾವುದೇ ರೀತಿಯ ನೆರವನ್ನಾದರೂ ಸರ್ಕಾರ ನೀಡಲಿದೆ ಎಂದು ಮಾಹಿತಿ ನೀಡಿದರು.

ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಿಗರು ಮುಂದಿದ್ದಾರೆ. ಈ ಮಾದರಿಯಲ್ಲೇ ಕನ್ನಡ ಸಂಸ್ಕøತಿ ಇಲಾಖೆಯಲ್ಲೂ ಸಹ ಕಾಗದ ರಹಿತ ಆಡಳಿತ ನಡೆಸಲು ಸಾಧ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ , ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ ತಿಳಿಸಿದರು. ಇದೇ ವೇಳೆ ಸಿಂಗಾಪುರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶ ಉದ್ದೇಶಿಸಿ ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ, ತಂದೆ-ತಾಯಿ, ಗುರುಹಿರಿಯರು ಹಾಗೂ ಸಮಾಜವನ್ನು ಗೌರವಿಸುವ ಕನ್ನಡ ಸಂಸ್ಕಾರದ ಮೂಲವನ್ನು ಮುಂದಿನ ಪೀಳಿಗೆಗೆ ರವಾನಿಸುವ ಪ್ರಕ್ರಿಯೆ ನಿರಂತರವಾಗಿರಬೇಕು. ಅದಕ್ಕೆ ಇಂತಹ ಸಮಾರಂಭಗಳು ಸ್ಫೂರ್ತಿಯಾಗಬೇಕೆಂದು ಅಭಿಪ್ರಾಯಪಟ್ಟರು.

ಕರ್ನಾಟಕದಿಂದ ದೂರ ದೇಶದಲ್ಲಿ ಕನ್ನಡದ ಜಾತ್ರೆಯನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಸುವುದು ನಿಜಕ್ಕೂ ಕಷ್ಟ. ಇಂತಹ ಕಾರ್ಯಕ್ರಮವನ್ನು ಸಂಘಟಿಸಿ ನಡೆಸುವ ವೇಳೆ ನ್ಯೂನ್ಯತೆಗಳಾದರೆ ಅದನ್ನು ಮನ್ನಿಸಬೇಕು ಎಂದು ಅಕ್ಕ ಮಾಜಿ ಅಧ್ಯಕ್ಷ ,ಅಕ್ಕ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಅಮರ್‍ನಾಥ್‍ಗೌಡ ಕೋರಿದರು.  ಅಕ್ಕ ಸಮ್ಮೇಳನದಲ್ಲಿ ಭಾನುವಾರವಾದ ಇಂದು ಕನ್ನಡ ಭಜನೆ, ಸ್ಪೀಡ್ ಪೇಂಟಿಂಗ್, ಗಣೇಶ ವಂದನಾ ಸೇರಿದಂತೆ ವಿವಿಧ ನೃತ್ಯ ಪ್ರಾಕಾರಗಳು, ಹಲವಾರು ಸಂಗೀತ ಕಾರ್ಯಕ್ರಮಗಳು, ನಾಟಕಗಳು ಮತ್ತು ಕಾಮಿಡಿ ನೈಟ್‍ನಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅರಣ್ಯ ಸಚಿವ ರಮಾನಾಥರೈ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ, ಮೈಸೂರು ವಿವಿ ಉಪಕುಲಪತಿ ಡಾ.ಕೆ.ಎಸ್.ರಂಗಪ್ಪ, ಅಕ್ಕ ಟ್ರಸ್ಟ್‍ನ ರವಿ ಡಂಕಣಕೋಟೆ, ಅಕ್ಕ ಅಧ್ಯಕ್ಷ ರಾಜ್‍ಪಾಟೀಲ್ ಮತ್ತಿತರರು ಅಕ್ಕ ಸಮ್ಮೇಳನಕ್ಕೆ ಶುಭ ಕೋರಿದರು.

► Follow us on –  Facebook / Twitter  / Google+

Facebook Comments

Sri Raghav

Admin