ಸಬ್ಸಿಡಿರಹಿತ ಅಡುಗೆ ಅನಿಲ ದರದಲ್ಲಿ 86 ರೂ. ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

gas

ನವದೆಹಲಿ. ಮಾ.02 : ಸಬ್ಸಿಡಿರಹಿತ ಅಡುಗೆ ಅನಿಲ (ಎಲ್ಪಿಜಿ) ದರದಲ್ಲಿ ಮತ್ತೆ ಏರಿಕೆಯಾಗಿದ್ದು. ಪರಿಸ್ಕ್ರುತ ದರ ಮಾರ್ಚ್ 1ರಿಂದಲೇ  ಜಾರಿಗೆ ಬಂದಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ 86 ರೂ. ಮುಂಬೈನಲ್ಲಿ 88, ಕೋಲ್ಕತ್ತ ಮತ್ತು ಚೆನ್ನೈನಲ್ಲಿ 85 ರು. ನಷ್ಟು ದುಬಾರಿಯಾಗಲಿದೆ. ಸ್ಥಳೀಯ ತೆರಿಗೆ ಕಾರಣ ವಿವಿಧ ರಾಜ್ಯಗಳಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ. ಕಳೆದ ತಿಂಗಳಷ್ಟೇ ಸಬ್ಸಿಡಿಯೇತರ ಎಲ್ಪಿಜಿ ಸಿಲಿಂಡರ್ ದರವನ್ನು 76ರಷ್ಟು ಹೆಚ್ಚಿಸಲಾಗಿತ್ತು.  ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಫೆಬ್ರವರಿ 28 ರ ವರೆಗೂ 651.50 ರೂ. ಇತ್ತು, ಮಾರ್ಚ್ 1 ರಿಂದ 737.50 ರೂ. ಆಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ಅಡುಗೆ ಅನಿಲದ ಬೆಲಯಲ್ಲು ಏರಿಕೆಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin