ಸಬ್ಸಿಡಿ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳು ನೇರವಾಗಿ ರೈತರ ಖಾತೆಗೆ ಜಮಾ ಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಫೆ.16- ಸಬ್ಸಿಡಿ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳು ನೇರವಾಗಿ ರೈತರ ಖಾತೆಗೆ ಜಮಾ ಮಾಡುವಂತೆ ಸರ್ಕಾರಕ್ಕೆ ಶ್ರೀ ಶಾಂತವೀರ ಸ್ವಾಮೀಜಿ ತಾಕೀತು ಮಾಡಿದರು. ನಗರದ ಆಕಾಶವಾಣಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರೇಡಿಯೋ ಕಿಸಾನ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ನೀರು, ವಿದ್ಯುತ್ ನೀಡಿದರೆ ಸಾಕು ಯಾವುದೇ ಸಬ್ಸಿಡಿ ಬೇಕಾಗಿಲ್ಲ. ಇವರೆಡನ್ನು ಕೊಟ್ಟರೆ ಇಡೀ ದೇಶಕ್ಕೆ ಆಹಾರ ಪದಾರ್ಥ ಬೆಳೆದು ಕೊಡುತ್ತಾರೆ. ರಾಜ್ಯದಲ್ಲಿ ಮಧ್ಯರಾತ್ರಿ ವಿದ್ಯುತ್ ನೀಡಲಾಗುತ್ತದೆ. ಈ ಹೊತ್ತಿನಲ್ಲಿ ಹೊಲ ಗದ್ದೆಗಳಿಗೆ ನೀರು ಹಾಯಿಸಲು ಹೋಗಿ ಹಾವು ಕಚ್ಚಿ ಅನೇಕರು ಮರಣ ಹೊಂದಿದ್ದಾರೆ. ಅದೇ ವಿದ್ಯುತನ್ನು ಹಗಲು ಹೊತ್ತಿನಲ್ಲಿ ನೀಡಲು ಇರುವ ತೊಂದರೆಯಾದರೂ ಏನು ಎಂದು ಪ್ರಶ್ನಿಸಿದರು.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದು ಸಹ ಕೃಷಿ ಕ್ಷೇತ್ರದಿಂದ ಹಿಮ್ಮುಖವಾಗಲು ಪ್ರಮುಖ ಕಾರಣ. ಕೃಷಿ ಕ್ಷೇತ್ರವೆಂದರೆ ಏನು ಲಾಭ ಇಲ್ಲ ಎನ್ನುವಂತಾಗಿದೆ. ಹೊರದೇಶದಲ್ಲಿರುವ ಮಾದರಿಯಲ್ಲಿಯೇ ಸಬ್ಸಿಡಿ ಸೇರಿದಂತೆ ಎಲ್ಲಾ ಸರ್ಕಾರದ ಸೌಲಭ್ಯಗಳು ನೇರವಾಗಿ ರೈತರ ಖಾತೆಗೆ ಜಮಾ ಮಾಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದರು.
ಪ್ರಗತಿಪರ ರೈತ ಟಿ.ನುಲೇನೂರು ಶಂಕರಪ್ಪ ಮಾತನಾಡಿ, ಕೃಷಿ ಲಾಭದಾಯಕವಾದ ಕ್ಷೇತ್ರವಾದರೆ ಮಾತ್ರ ಉಳಿಯಲು ಸಾಧ್ಯ. ರೈತರ ಪರ ಯೋಜನೆಗಳು ಕೇವಲ ತೋರಿಕೆಯಾಗಿದೆ. ಯಾವುದೇ ಪ್ರಯೋಜನವಿಲ್ಲ. 2ನೇ ಹಸಿರು ಕ್ರಾಂತಿಯಾಗುವಂತೆ ರೈತರಲ್ಲಿ ಸ್ಪೂರ್ತಿ ತುಂಬಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಹೇಳಿದರು.
ಪ್ರಗತಿಪರ ರೈತರಾದ ಸುಮಂಗಳಮ್ಮ ವೀರಭದ್ರಪ್ಪ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ ಮಾತನಾಡಿದರು.ದಾವಣಗೆರೆ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ವನೋವೈದ್ಯ ಡಾ.ಆರ್.ಎಸ್.ದೀಪಕ್, ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಹನುಮಂತರಾಯಪ್ಪ, ವಿಧಾನಪರಿಷತ್ ಸದಸ್ಯೆ ಜಯಮ್ಮಬಾಲರಾಜ್ ಮತ್ತಿತರರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin