ಸಭೆಗೆ ಅಧಿಕಾರಗಳ ಗೈರು : ಅಧ್ಯಕ್ಷರ ಅಸಮಧಾನ

ಈ ಸುದ್ದಿಯನ್ನು ಶೇರ್ ಮಾಡಿ

malavalli

ಮಳವಳ್ಳಿ, ಆ.12 – ಕಳೆದ ವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಪೂರ್ವಭಾವಿ ಸಭೆಗೆ ಗೈರು ಹಾಜರಾಗಿ ತಹಸೀಲ್ದಾರ್ ಅವರ ಅಸಮಧಾನಕ್ಕೆ ಗುರಿಯಾಗಿ ತಾಲ್ಲೂಕು ಕಚೇರಿಯಿಂದ ನೋಟೀಸ್ ಪಡೆದಿದ್ದ ತಾಲ್ಲೂಕಿನ ಬಹುತೇಕ ಇಲಾಖಾ ಅಧಿಕಾರಿಗಳು ಕರೆಯಲಾಗಿದ್ದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಗೂ ಗೈರುಹಾಜರಾಗಿ ಅಧ್ಯಕ್ಷರ ಅಸಮಧಾನಕ್ಕೂ ಗುರಿಯಾದರು. ಕೆಡಿಪಿ ಸಭೆಗೆ ಹಲವರು ಮೊನ್ನೆ ಗೈರು ಹಾಜರಾಗಿದ್ದರಿಂದ ನಿನ್ನೆಗೆ ಮುಂದೂಡಲಾಗಿತ್ತು. ಬೆಳಿಗ್ಗೆ 10.30ಕ್ಕೆ ಸಭೆ ನಿಗದಿಯಾಗಿತ್ತಾದರೂ 12 ಗಂಟೆಯಾಗಿದ್ದರೂ ಸಾಕಷ್ಟು ಇಲಾಖಾ ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣುತ್ತಿತ್ತು.
ಇದರಿಂದ ಸಿಡಿಮಿಡಿಗೊಂಡ ಅಧ್ಯಕ್ಷ ವಿಶ್ವಾಸ್, ಒಂದು ವಾರ ಮುಂಚಿತವಾಗಿಯೇ ನೋಟೀಸ್ ನೀಡಿದ್ದರು ಅಧಿಕಾರಿಗಳು ಸರಿಯಾಗಿ ಮೀಟಿಂಗ್‍ಗೆ ಹಾಜರಾಗುತ್ತಿಲ್ಲವೇಕೆ ಅಧಿಕಾರಿಗಳಿಗೆ ಆಸಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು.
ಕೆಲವರು ಇನ್ನೇನೋ ಬರುತ್ತಾರೆ ಕೆಲವರು ಇನ್ನೂ ಬಂದಿಲ್ಲ ಅವರಿಗೆ ಫೋನ್  ಮಾಡುತ್ತೇನೆ ಎಂದು ಪ್ರಭಾರೆ ಇಓ ಬಾಬು ಅವರ ಉತ್ತರದಿಂದ ಇನ್ನಷ್ಟು ಅಸಮಧಾನಗೊಂಡ ಅವರು ಫೋನ್  ಮಾಡಿ ಪದೇ ಪದೇ ಕರೆಯಲು ಇದೇನು ನಮ್ಮ ಮನೆಯ ಮದುವೆ ಕಾರ್ಯ ಅಲ್ಲ. ಬರದಿದ್ದವರಿಗೆ ಷೋಕಾಸ್ ನೋಟೀಸ್ ನೀಡಿ ಮೇಲಾಧಿಕಾರಿಗಳಿಗೆ ವರದಿ ಮಾಡಿ ಎಂದು ಸೂಚಿಸಿದರು.
ಅಷ್ಟು ಹೊತ್ತಿಗೆ ಕೆಲ ಅಧಿಕಾರಿಗಳು ಆಗಮಿಸತೊಡಗಿದರು. ಬೆಳೆ ವಿಮೆ ಯೋಜನೆಯಡಿ ಕೃಷಿ ಅಧಿಕಾರಿಗಳು ಸರಿಯಾಗಿ ಪ್ರಚಾರ ನಡೆಸಿಲ್ಲ ಎಂಬ ಅಸಮಧಾನ ಅಧ್ಯಕ್ಷರಿಂದ ವ್ಯಕ್ತವಾಯಿತು. ಈ ಕುರಿತು ಸ್ಪಷ್ಟನೆ ನೀಡಿದ ಸಹಾಯಕ ಕೃಷಿ ನಿರ್ದೇಶಕ ಪರಮೇಶ್ ಅವರು ಈ ಕುರಿತು ಪತ್ರಿಕೆ, ಟಿವಿಗಳಲ್ಲಿ ಪ್ರಚಾರ ಮಾಡುವುದರ ಜೊತೆಗೆ ತಾಪಂ ಕಚೇರಿ ಮುಂದೆಯೇ ಫಲಕ ಹಾಕಲಾಗಿದೆ ಎಂದರು. ತಾಪಂ ಅಧ್ಯಕ್ಷರಾದ ಆರ್.ಎನ್. ವಿಶ್ವಾಸ್ ಅಧ್ಯಕ್ಷತೆ ವಹಿಸಿದ್ದ ಸಭೈಯಲ್ಲಿ ಉಪಾಧ್ಯಕ್ಷರಾದ ಸಿ ಮಾಧುಮ ಇಓ ಬಾಬು. ನರೇಗ ಅಧಿಕಾರಿ ಪವನ್‍ಕುಮಾರ್ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin