ಸಭೆಗೆ ಅಧಿಕಾರಿಗಳ ಗೈರು : ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

beluru-3

ಬೇಲೂರು, ಆ.29- ತಾಲೂಕಿನ ನಾರ್ವೆಪೇಟೆ ಗ್ರಾಮ ಪಂಚಾಯಿತಿಯಲ್ಲಿ ನಡೆದ 2016-17ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಬಾರದಿರುವುದಕ್ಕೆ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರೆ, ಸದಸ್ಯ ಹಾಗೂ ಗ್ರಾಮಸ್ಥರ ನಡುವೆ ಕೋಳಿ ಅಂಗಡಿ ತೆರವಿನ ವಿಚಾರವಾಗಿ ಕೆಲ ಸಮಯ ಮಾತಿನ ಚಕಮಕಿ ನಡೆದ ಘಟನೆ ನಡೆಯಿತು.  ತಾಲೂಕಿನ ಅರೇಹಳ್ಳಿ ಹೋಬಳಿ ನಾರ್ವೆಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು, ನಾವು ಸಾಕಷ್ಟು ವರ್ಷಗಳಿಂದ ಮನೆ ಕಂದಾಯ ಹಾಗೂ ನಲ್ಲಿ ನೀರಿನ ಕಂದಾಯವನ್ನು ತಪ್ಪದೆ ಕಟ್ಟುತಿದ್ದೇವೆ. ಆದರೆ ನಮಗೆ ಶುದ್ದವಾದ ನೀರನ್ನು ಕೊಡುತ್ತಿಲ್ಲ. ನೀರಿನ ಪೈಪ್ ರಸ್ತೆ ಮಧ್ಯದಲ್ಲಿರುವುದರಿಂದ ಕಲುಷಿತ ನೀರು ಬರುತ್ತಿದೆ ತಕ್ಷಣವೆ ಶುದ್ದವಾದ ನೀರನ್ನು ಕೊಡುವುದಕ್ಕೆ ಕ್ರಮ ಕೈಗೊಳ್ಳಿ ಎಂದು ನಾರ್ವೆ ಗ್ರಾಮಸ್ಥರು ಒತ್ತಾಯಿಸಿದರು.

ತಾಪಂ ಅಧ್ಯಕ್ಷ ತಮ್ಮಣ್ಣಗೌಡ ಮಾತನಾಡಿ, ಸರ್ಕಾರದಿಂದ ಸಿಗುವ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ಸರಿಯಾಗಿ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗ್ರಾಮ ಸಭೆಗಳನ್ನು ಮಾಡುತ್ತಿದ್ದು, ಸಾರ್ವಜನಿಕರು ಶಾಂತ ರೀತಿಯಿಂದ ವರ್ತಿಸುವ ಮೂಲಕ ಇಂತಹ ಸಭೆಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳುವುದಕ್ಕೆ ಮುಂದಾಗಬೇಕು ಎಂದು ತಿಳಿಸಿದರು.  ಜಿಪಂ ಸದಸ್ಯೆ ರತ್ನಮ್ಮ ಐಸಾಮಿಗೌಡ ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಕೊಡಿಸುವತ್ತ ಗಮನಹರಿಸಬೇಕು.  ಹಾಗೂ ನಮ್ಮ ಜಿಪಂ ಅನುದಾನದಲ್ಲೂ ಸಹ ಈ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿಸಲು ಮುಂದಾಗುವುದಾಗಿ ತಿಳಿಸಿದರು.ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ , ತಾಪಂ ಸದಸ್ಯ ಸೋಮಯ್ಯ, ಗ್ರಾಪಂ ಸದಸ್ಯರುಗಳಾದ ಇಷ್ಮಾಯಿಲ್, ಪೂರ್ಣೇಶ್, ಸುಬ್ಬ, ನಂದಿನಿ, ಶೋಭ, ಸೌಭಾಗ್ಯ, ದಸಂಸ ಮುಖಂಡ ನಿಂಗರಾಜು, ಪಿಡಿಒ ಪಲ್ಲವಿ, ಕಾರ್ಯದರ್ಶಿ ವೀರೇಶ್ ಇನ್ನಿತರರು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin