ಸಭೆ, ಸಮಾರಂಭದಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕಾಯ್ದೆ

ಈ ಸುದ್ದಿಯನ್ನು ಶೇರ್ ಮಾಡಿ

Food--01

ಬೆಂಗಳೂರು-ವಿವಾಹ, ಮುಂಜಿ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ, ಸಭೆಗಳಲ್ಲಿ, ಸರ್ಕಾರಿ, ಖಾಸಗಿ ಸಮಾರಂಭದಲ್ಲಿ, ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಜನ ಸೇರದಿದ್ದಾಗ, ಸಿದ್ಧಪಡಿಸಿದ ಆಹಾರ ಹೆಚ್ಚಾಗುತ್ತದೆ. ಅದನ್ನು ದೂರಕೊಂಡೊಯ್ದು ಎಸೆಯುವುದು ಬಹುತೇಕ ಸಂದರ್ಭದಲ್ಲಿ ವಾಡಿಕೆ. ಆದರೆ, ಇದಕ್ಕೆತಡೆ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿಯೇ ಕರ್ನಾಟಕ ಆಹಾರ ಪೋಲಾಗುವಿಕೆ ನಿಯಂತ್ರಣ ಮತ್ತು ವಿನಿಮಯ ವಿಧೇಯಕಕರಡು ಸಿದ್ಧಪಡಿಸಿದೆ. ಹೆಚ್ಚಾದ ಆಹಾರವನ್ನು ಕಸಕ್ಕೆ ಎಸೆಯುವವರಿಗೆ ಹೊಣೆಗಾರಿಕೆ ಮೂಡಿಸಲು ಈ ಕಾರ್ಯಕ್ಕೆ ಮುಂದಾಗಿದೆ.

ಅನ್ನಭಾಗ್ಯ :
ಬಡಜನರ ಅನುಕೂಲಕ್ಕಾಗಿ ಹಾಗೂ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂದು ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಆರಂಭಿಸಿರುವ ಸರ್ಕಾರ ಇದೀಗ ಈ ನಿಟ್ಟಿನಲ್ಲಿಕಾಯ್ದೆತರಲು ಮುಂದಾಗುವ ಮೂಲಕ ಇನ್ನೊಂದು ಹೆಜ್ಜೆ ಮುಂದಿರಿಸಿದೆ. ಮಾಹಿತಿಯೊಂದರ ಪ್ರಕಾರ ಬೆಂಗಳೂರಲ್ಲೇ ಪ್ರತಿ ವರ್ಷ 2.60 ಕೋಟಿಜನ ಸೇವಿಸುವಷ್ಟು ಆಹಾರ ವ್ಯರ್ಥವಾಗುತ್ತಿದೆ.ಈ ಹಿನ್ನೆಲೆಆಹಾರ ವ್ಯರ್ಥ ತಡೆಗಟ್ಟಲು ಕಾಯ್ದೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಯು.ಟಿ.ಖಾದರ್ ಈ ಹಿಂದೆ ಹೇಳಿದ್ದರು.ಇದೀಗ ಬಹುತೇಕ ಆಚರಣೆಗೆ ಬರುವ ಹಂತ ತಲುಪಿದೆ.ಇದರಲ್ಲಿ ಅತಿ ಮುಖ್ಯವಾಗಿಅಗತ್ಯಕ್ಕಿಂತ ಹೆಚ್ಚಿನ ಆಹಾರ ತಯಾರಿ, ಆಹಾರದ ಪೌಷ್ಟಿಕಾಂಶ ಹಾಳಾಗುವಂತೆ ಶೇಖರಣೆ ಮಾಡಿಡುವುದನ್ನು ವ್ಯರ್ಥಎಂದು ಪರಿಗಣಿಸಲಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಯಾರ್ಯಾರು ವ್ಯಾಪ್ತಿಗೆ :

ವ್ಯಕ್ತಿಗಳು, ಗುಂಪು ಅಥವಾ ಹೋಟೆಲ್, ಕಲ್ಯಾಣ ಮಂಟಪದಂತಹ ಸಂಸ್ಥೆಗಳೂ ಈ ವಿಧೇಯಕದ ವ್ಯಾಪ್ತಿಗೆ ಬರಲಿವೆ. ಎಲ್ಲಾ 30 ಜಿಲ್ಲೆಗಳಲ್ಲಿಯೂ ಪ್ರತ್ಯೇಕ ಸಮಿತಿ ರಚಿಸಿ ಅದಕ್ಕೆಆಯಾಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತುಜಿಲ್ಲಾ ಪಂಚಾಯಿತಿಅಧ್ಯಕ್ಷರುಇದಕ್ಕೆ ಸದಸ್ಯರಾಗಿರುತ್ತಾರೆ.ದೂರುಅಥವಾ ಸ್ವಯಂಪ್ರೇರಿತವಾಗಿಯಾವುದೇ ಸ್ಥಳವನ್ನು ಪರಿಶೀಲಿಸುವ ಹಾಗೂ ಭಾರತೀಯದಂಡ ಸಂಹಿತೆಅಡಿಯಲ್ಲಿದಂಡ ವಿಧಿಸಲುದೂರುದಾಖಲಿಸುವ ಅಧಿಕಾರಇವರಿಗೆಇರುತ್ತದೆ. ಪ್ರತಿಜಿಲ್ಲೆಯಲ್ಲೂ ಈ ಕಾಯ್ದೆಜಾರಿಗಾಗಿಯೇ ವಿಶೇಷ ನ್ಯಾಯಾಲಯಇರಬೇಕು.ತಪ್ಪು ಸಾಬೀತಾದರೆಅಂತಹ ಸಂಸ್ಥೆಯ ಮಾಲೀಕ, ಪಾಲುದಾರ ಸೇರಿಉಸ್ತುವಾರಿ ಹೊತ್ತವರಿಗೆ 6 ತಿಂಗಳವರೆಗೆ ಜೈಲು ಶಿಕ್ಷೆ ಹಾಗೂ 10 ಸಾವಿರರೂ.ವರೆಗೆ ಶಿಕ್ಷೆ ವಿಧಿಸಬಹುದಾಗಿದೆ.
ಅಧ್ಯಯನ ವರದಿ : 

ಆಹಾರ ಪೋಲಾಗುವ ಬಗ್ಗೆ 2012ರಲ್ಲಿ ಕೃಷಿ ವಿಜ್ಞಾನ ವಿವಿ ಅಧ್ಯಯನ ನಡೆಸಿತ್ತು. ವಿವಿಯ 10 ಹಿರಿಯ ಸಂಶೋಧಕರತಂಡ ಬೆಂಗಳೂರಿನ 531 ಕಲ್ಯಾಣ ಮಂಟಪಗಳನ್ನು 6 ತಿಂಗಳು ಸಮೀಕ್ಷೆ ನಡೆಸಿ, 84,960 ಮದುವೆಗಳಲ್ಲಿ ವಾರ್ಷಿಕ 943 ಟನ್‍ಗುಣಮಟ್ಟದಆಹಾರ ವ್ಯರ್ಥವಾಗುತ್ತದೆ. 2.6 ಕೋಟಿಜನರಿಗೆ ಸಾಮಾನ್ಯಆಹಾರ ನೀಡುವಷ್ಟುಇದರ ಪ್ರಮಾಣ. ಪ್ರತಿಊಟಕ್ಕೆ 40 ರೂ.ನಂತೆ ಲೆಕ್ಕ ಮಾಡಿದರೂ 340 ಕೋಟಿರೂ. ಆಗುತ್ತದೆಎಂದು ತಿಳಿಸಿದೆ.

Facebook Comments

Sri Raghav

Admin