ಸಮಾಜವಾದಿ ಔಟ್, ಮುಖ್ಯಮಂತ್ರಿ ಇನ್

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath

ಲಕ್ನೋ, ಏ.7-ಉತ್ತರ ಪ್ರದೇಶ ರಾಜ್ಯದಲ್ಲಿ ಜಾರಿಯಲ್ಲಿರುವ ಸಮಾಜವಾದಿ ಎಂಬ ಸರ್ಕಾರಿ ಯೋಜನೆಗಳ ಹೆಸರುಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ.  ಸಮಾಜವಾದಿ ಎಂಬ ಹೆಸರನ್ನು ಹೊಂದಿರುವ ಯೋಜನೆಗಳಿಗೆ ಇನ್ನು ಮುಂದೆ ಮುಖ್ಯಮಂತ್ರಿ ಎಂಬ ಪದವನ್ನು ಬದಲಾವಣೆ ಮಾಡಬೇಕೆಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.  ನಿನ್ನೆ ರಾತ್ರಿ ಲಕ್ನೊದಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ಈ ಕುರಿತು ಸೂಚನೆ ನೀಡಿರುವ ಯೋಗಿ, ಸಮಾಜವಾದಿ ಎಂಬ ಹೆಸರಿರುವ ಯೋಜನೆಗಳ ಪಟ್ಟಿಯನ್ನು ತಮಗೆ ನೀಡುವಂತೆಯೂ ಇದರಿಂದ ಸಂಪುಟದಲ್ಲಿ ಆ ಹೆಸರನ್ನು ಮುಖ್ಯಮಂತ್ರಿ ಯೋಜನೆ ಎಂಬ ಹೊಸ ಹೆಸರುಗಳಿಂದ ಬದಲಾವಣೆ ಮಾಡಬಹುದು ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin