ಸಮಾಜ ಕಲ್ಯಾಣ ಇಲಾಖೆಯ ಕ್ರಮ ಖಂಡಿಸಿ ಎಸ್ಎಸ್ಡಿಯಿಂದ ಕಚೇರಿಗೆ ಬೀಗ
ಮಾಲೂರು, ಸೆ.20- ಸಮಾಜ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಕಚೇರಿಗೆ ಬೀಗ ಹಾಕಿ ಎಸ್ಎಸ್ಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಗೋವಿಂದಸ್ವಾಮಿ, ಪಟ್ಟಣದ ಬಾಲಕರ ಕಾಲೇಜು ವಿಧ್ಯಾರ್ಥಿ ನಿಲಯದಲ್ಲಿ ಸೆ.17ರಿಂದ 19ರವರೆಗೂ ವಿಧ್ಯಾರ್ಥಿಗಳಿಗೆ ಊಟ ನೀಡಿಲ್ಲ. ಈ ಬಗ್ಗೆ ಜಿಲ್ಲಾ ಸಮಾಜ ಕಲ್ಯಾಣಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದರು. ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳ ಕೊರತೆ ಒಂದು ತಿಂಗಳಿಂದ ಎದುರಾಗುತ್ತಿದೆ. ವಿಧ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ವಿಧ್ಯಾಭ್ಯಾಸ ಮಾಡಲು ತೊಂದರೆಯಾಗುತಿರುವುದರಿಂದ ಅಧಿಕಾರಿಗಳಿಲ್ಲದ ಕಚೇರಿ ಅವಶ್ಯಕತೆಯಿಲ್ಲದಿರುವುದರಿಂದ ಪ್ರಾಣಿಗಳು ತಿನ್ನುವುದಕ್ಕೂ ಕೀಳಾದ ಅಕ್ಕಿಯನ್ನು ವಿದ್ಯಾರ್ಥಿಗಳಿಗೆ ನೀಡಿರುವುದನ್ನು ಖಂಡಿಸಿ ಕೂಡಲೇ ಕ್ರಮ ಜರೂಗಿಸುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಸಂಜೀವಪ್ಪ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಕೈಬಿಡಲಾಯಿತು.ಆರ್ಐ ಬೀರಪ್ಪ, ಇಲಾಖೆಯ ರಾಮಸ್ವಾಮಿ, ಸಮತಾ ಸೈನಿಕ ದಳದ ಜಿಲ್ಲಾ ಕಾರ್ಯಾಧ್ಯಕ್ಷ ಕೋಡೂರು ಗೋಪಾಲ್, ವಿಧ್ಯಾರ್ಥಿಗಳಾದ ರಾಘವೇಂದ್ರ, ಎಸ್.ವೆಂಕಟೇಶ್, ಪವನ್ ಕಲ್ಯಾಣ್, ಜಿ.ಎನ್.ಸುನೀಲ್ಕುಮಾರ್ ಇದ್ದರು.
► Follow us on – Facebook / Twitter / Google+