ಸಮುದಾಯ ಭವನ ಕಟ್ಟುವುದಲ್ಲ, ಅದನ್ನು ಸರಿಯಾಗಿ ನಿರ್ವಹಿಸಿ : ಬಿ.ವೈ. ಪಾಟೀಲ

ಈ ಸುದ್ದಿಯನ್ನು ಶೇರ್ ಮಾಡಿ

7
ಕಲಘಟಗಿ,ಫೆ.23- ಸಮುದಾಯ ಭವನ ಕಟ್ಟುವುದಲ್ಲ, ಅದನ್ನು ಸರಿಯಾಗಿ ನಿರ್ವಹಿಸಿ ಸ್ವಚ್ಛತೆ ಕಾಪಾಡಿ, ಎಲ್ಲ ಸಮಾಜ ಬಾಂಧವರ ಕಾರ್ಯಕ್ರಮಗಳು ನಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕಲ್ಯಾಣ ಕಿರಣ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಹಾಗೂ ಮಕ್ಕಳ ಸಹಾಯವಾಣಿಯ ನಿರ್ದೇಶಕ ಬಿ.ವೈ. ಪಾಟೀಲ ಹೇಳಿದರು. ಪಟ್ಟಣದಲ್ಲಿ 2011-12 ಹಾಗೂ 2012-13 ಸಾಲಿನ ಎಸ್‍ಎಫ್‍ಸಿ ಶೇ. 22.75 ಯೋಜನೆ ಅಡಿಯಲ್ಲಿ 30.50 ಲಕ್ಷಗಳ ಅನುದಾನದಲ್ಲಿ ನಿರ್ಮಿಸಲಾದ ಡಾ. ಬಿ.ಆರ್ ಅಂಬೇಡ್ಕ್‍ರ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ನಿನ್ನೆ ನೆರವೇರಿಸಿ ಮಾತನಾಡಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಹೆಸರಿನ ಸಮುದಾಯ ಭವನ ಕೇವಲ ಒಂದೇ ಜಾತಿಯವರಿಗೆ ಸೀಮಿತವಾಗದೇ ಎಲ್ಲ ಸಮಾಜದವರ ಕಾಯಕ್ರಮಗಳು ಈ ಭವನದಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ಸಮುದಾಯ ಭವನದ ಒಳಗೆ ಅಂಬೇಡ್ಕರ ಪುತ್ಥಳಿ ನಿರ್ಮಾಣ ಮಾಡುವ ಕೆಲಸ ಯುವಕ ಮಂಡಳ ಸದಸ್ಯರು ಮಾಡಬೇಕು ಎಂದು ಕರೆ ನೀಡಿದರು.ಗೀತಾ ದೈವಜ್ಞ, ಪ್ರವೀಣ ದೈವಜ್ಞ, ಶಾಂತವ್ವ ರಾಠೋಡ, ಶಾಂತಾ ಶೀಗೀಹಳ್ಳಿ, ಬಸವರಾಜ ಮಾದರ, ತಾನಾಕಿ ನಿಕ್ಕಂ, ಗಂಗಾಧರ ಗೌಳಿ, ಗದಿಗೆವ್ವ ಹಟಗಾರ, ಸಿಕಂದರಬಾಷಾ ಬೇಪಾರಿ, ಸಾವಿತ್ರಿ ಹುಲಿಹೊಂಡ, ರೂಪಾ ಗೌಳಿ, ಟೋಪಣ್ಣ ಲಮಾಣಿ ಸೇರಿದಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಸ್.ಜಿ. ಗೋಸಾವಿ, ಎಸ್.ಬಿ. ಮರಿಗೌಡರ ಸಹಾಯಕ ಅಭಿಯಂತರರು ಹಾಗೂ ಸಿಬ್ಬಂದಿ ವರ್ಗ ಕಿರಣ ಯುವಕ ಮಂಡಳದ ಸರ್ವ ಸದಸ್ಯರು ಮಹಿಳಾ ಸಂಘದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

Click Here to Download  :  Android / iOS  

Facebook Comments

Sri Raghav

Admin