ಸಮುದ್ರದಲ್ಲಿ ದೋಣಿ ಮುಳುಗಿ ಮೀನುಗಾರ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

mangaluru--fish

ಮಂಗಳೂರು, ಸೆ.20– ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮುಳುಗಿ ಐವರು ಈಜಿ ದಡ ಸೇರಿದ್ದು, ಒಬ್ಬ ನಾಪತ್ತೆಯಾಗಿರುವ ಘಟನೆ ಉಲ್ಲಾಳ ಕಡಲ ತೀರ ಅಳಿವೆಬಾಗಿಲು ಬಳಿ ನಡೆದಿದೆ.ಕಳೆದ 16ರಂದು ಅಬೂಬಕ್ಕರ್ ಅಶ್ರಫ್ ಎಂಬುವರ ದೋಣಿಯಲ್ಲಿ ಆರು ಮಂದಿಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದರು. ಆದರೆ, ನಿನ್ನೆ ರಾತ್ರಿ ದೋಣಿ ಮುಳುಗಿದ್ದು, ಐವರು ಸುರಕ್ಷಿತವಾಗಿ ಈಜಿ ದಡ ಸೇರಿದ್ದಾರೆ.ಆದರೆ, ಕುಮಟ ನಿವಾಸಿ ಹಮೀದ್ ಎಂಬ ಮೀನುಗಾರ ನಾಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
► Follow us on –  Facebook / Twitter  / Google+

Facebook Comments

Sri Raghav

Admin