ಸಮೋಸಾ ಮಾರುವವನ ಮಗನಿಗೆ ಜಿಇಇಯಲ್ಲಿ 6ನೇ ರ‍್ಯಾಂಕ್..!

ಈ ಸುದ್ದಿಯನ್ನು ಶೇರ್ ಮಾಡಿ

Manoj

ಹೈದ್ರಾಬಾದ್, ಮೇ 24- ಜೆಇಇ ಪರೀಕ್ಷೆಯ ಫಲಿತಾಂಶ ಹೊರಬಿದ್ದು ಸಮೋಸಾ ಮಾರಾಟ ಮಾರುವ ಮಗನಿಗೆ ಜೆಇಇಯಲ್ಲಿ 6ನೆ ರ್ಯಾಂಕ್ ಹಾಗೂ ಸಿಇಟಿಯಲ್ಲಿ ಮೊದಲ ರ್ಯಾಂಕ್ ಗಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.  ವಿ.ಸುಬ್ಬಾರಾವ್ ಹಾಗೂ ಸೂರ್ಯಕಲಾ ಎಂಬುವವರ ಸಮೋಸಾ ಮಾರುವ ಪುತ್ರನಾದ ವರ್ಬಿಶೇಠ್ ಮೋಹನ್ ಅಭಯ್ ಎಂಬುವವನೇ ಜಿಇಇಯಲ್ಲಿ 6 ರ್ಯಾಂಕ್ ಗಳಿಸಿದ ವಿದ್ಯಾರ್ಥಿ  11.8 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಆಂಧ್ರಪ್ರದೇಶದಲ್ಲಿ ಸಿಇಟಿ ಬರೆದಿದ್ದು ಇದರಲ್ಲಿ ಅಭಯ್ 360ಕ್ಕೆ 345 ಅಂಕಗಳನ್ನು ಗಳಿಸುವ ಮೂಲಕ 6ನೆ ರ್ಯಾಂಕ್ ಗಳಿಸಿದ್ದಾನೆ. ಅಲ್ಲದೆ ಇಎಎಂಸಿಇಟಿ (ಇಂಡಿಯನಿರಿಂಗ್ ಅರ್ಗಿಕಲ್ಚರ್ ಆ್ಯಂಡ್ ಮೆಡಿಕಲ್ ಕಾಮನ್ ಎಂಟ್‍ರೆನ್ಸ್ ಟೆಸ್ಟ್)ನಲ್ಲಿ ಮೊದಲ ರ್ಯಾಂಕ್ ಗಳಿಸಿ ಅಚ್ಚರಿ ಮೂಡಿಸಿದ್ದಾನೆ.ಸುದ್ದಿಗಾರರೊಂದಿಗೆ ಮಾತನಾಡಿದ ಅಭಯ್ ಪ್ರೋಷಕರ, ಉಪನ್ಯಾಸಕರ ಪ್ರೋತ್ಸಾಹ ಹಾಗೂ ಕಠಿಣ ಅಭ್ಯಾಸದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಗಿದ್ದು ನಾನು 8ನೆ ತರಗತಿಯಿಂದಲೂ ಇಂಜಿನಿಯರ್ ಆಗುವ ಕನಸು ಹೊತ್ತಿದ್ದು ಈಗ ನನ್ನ ಗುರಿಯನ್ನು ಸಾಧಿಸಲು ಸುಲಭವಾಗಿದೆ ಎಂದಿದ್ದಾನೆ. ಅಭಯ್‍ನ ಪ್ರೋಷಕರು ಮಾತನಾಡಿ, ನಾವು ಪಶ್ಚಿಮ ಗೋದಾವರಿಯಿಂದ 13 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದು ಸಮೋಸಾ ಮಾರುವ ಮೂಲಕ ಜೀವನ ನಡೆಸುತ್ತಿದ್ದೇವೆ ನಮ್ಮ ಕುಟುಂಬದಲ್ಲಿ ಯಾರು ವಿದ್ಯಾವಂತರಾಗಿಲ್ಲ . ಈಗ ನನ್ನ ಮಗ ಇಂಜಿನಿಯರ್ ವಿದ್ಯಾರ್ಥಿಯಾಗಿರುವುದಕ್ಕೆ ಸಂತಸವಾಗಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin