“ಸಮ್ ಜೆ ತೊ ಟೀಕ್, ವರ್ನಾ ಕಥಮ್ ಕರ್ದೊ” : ಹುತಾತ್ಮ ಮನ್ ದೀಪ್ ಸಿಂಗ್ ಪತ್ನಿ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Wife-04

ಹರಿಯಾಣ ಅ.29 ಹುತಾತ್ಮ ಯೋಧ ಮನ್ ದೀಪ್ ಸಿಂಗ್ ಪತ್ನಿ ಪಾಕಿಸ್ತಾನದ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. “ಪಾಕಿಸ್ತಾನ್ ಸಮ್ ಜೆ ತೊ ಟೀಕ್, ವರ್ನಾ ಕಥಮ್ ಕರ್ದೊ” ಎಂದು ಪ್ರಧಾನಿ ಮೋದಿಯವರಿಗೆ ಹುತಾತ್ಮ ಯೋಧ ಮನ್ ದೀಪ್ ಸಿಂಗ್ ಪತ್ನಿ ಮನವಿ ಮಾಡಿದ್ದಾರೆ.  ಪತಿಯನ್ನು ಕಳೆದುಕೊಂಡ ನೋವು ನಂದೆಡೆಯಾದರೆ ಪಾಕ್ ವಿರುದ್ಧ ಆಕ್ರೋಶ ತುಂಬಿಕೊಂಡು ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಬುದ್ದಿ ಹೇಳಬೇಕು, ಕೇಳದಿದ್ದರೆ ಪಾಕಿಸ್ತಾನವನ್ನೇ ಧ್ವಂಸದಮಾಡಿಬಿದಿ, ಪಾಕ್ ನ ಕ್ರೌರ್ಯದಿಂದ ಭಾರತದಲ್ಲಿ ಪ್ರತಿದಿನ ಕಪ್ಪು ದೀಪಾವಳಿ ಆಚರಿಸುವುದು ಬೇಡ, ಎಂದು ತಮ್ಮ ನೋವು ಮತ್ತು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಹುತಾತ್ಮ ಯೋಧ 27 ವರ್ಷದ ಮನ್ ದೀಪ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಹರಿಯಾಣದ ಕುರುಕ್ಷೇತ್ರಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಸುದ್ದಿ ವಾಹಿನಿಯೊಂದಿ ಮಾತನಾಡಿದ ಯೋಧನ ಪತ್ನಿ ಈ ಆಕ್ರೋಶದ ನುಡಿಗಳನ್ನು ವ್ಯಕ್ತಪಡಿಸಿದ್ದಾರೆ.  ದೇಶಕ್ಕಾಗಿ ಪ್ರಾಣ ನೀಡಿರುವ ಹುತಾತ್ಮ ಯೋಧರಿಗೆ ನನ್ನ ನಮನಗಳು. ತಮ್ಮ ದೇಶ ರಕ್ಷಣೆಗಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. ಎಲ್ಲಾ ಯೋಧರಿಗೂ ನನ್ನ ಸಲಾಂ, ನನ್ನ ಪತಿ ಕೂಡಾ ಧೈರ್ಯಶಾಲಿ ಎಂದು ಮನ್ ದೀಪ್ ಸಿಂಗ್ ಪತ್ನಿ ಹೇಳಿದ್ದಾರೆ.  ಕುರುಕ್ಷೇತ್ರದಲ್ಲಿ ಹುತಾತ್ಮ ಮನ್ ದೀಪ್ ಸಿಂಗ್ ಪಾರ್ಥೀವ ಶರೀರವನ್ನು ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.

► Follow us on –  Facebook / Twitter  / Google+

 

 

Facebook Comments

Sri Raghav

Admin