ಸರಗಳ್ಳನ ಸೆರೆ : 29.76 ಲಕ್ಷ ಮೌಲ್ಯದ ಒಂದು ಕೆಜಿ ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

Chain-BEngaluru--01

ಬೆಂಗಳೂರು, ಸೆ.20-ನಗರದಲ್ಲಿ ಸರ ಅಪಹರಣ, ಮನೆಕಳ್ಳತನ ಹಾಗೂ ಜೇಬುಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ಸೆರೆಹಿಡಿದಿರುವ ರಾಮಮೂರ್ತಿನಗರ ಠಾಣೆ ಪೊಲೀಸರು 29.76 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಮದನಪಲ್ಲಿ ಟೌನ್ ನಿವಾಸಿ ಸೈಯದ್ ಮಹಮದ್ ಅಲಿ ಬಂಧಿತ ಸರಗಳ್ಳ. ಈತನ ಬಂಧನದಿಂದ ರಾಮಮೂರ್ತಿನಗರ, ಹೆಣ್ಣೂರು, ಬಾಣಸವಾಡಿ, ಬೆಂಗಳೂರು ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಗಳ ಒಟ್ಟು 31 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತ ಅಜಯ್ ಹಿಲೋರಿ, ಬಾಣಸವಾಡಿ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಕೆ.ಪಿ.ರವಿಕುಮಾರ್ ಅವರ ನೇತೃತ್ವದಲ್ಲಿ ರಾಮಮೂರ್ತಿನಗರ ಠಾನೆ ಇನ್ಸ್‍ಪೆಕ್ಟರ್ ಚಂದ್ರಧರ ಮತ್ತು ಹೆಣ್ಣೂರು ಠಾಣೆ ಇನ್ಸ್‍ಪೆಕ್ಟರ್ ಗೋಪಾಲನಾಯಕ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.

Facebook Comments

Sri Raghav

Admin