ಸರಣಿ ಕೈವಶ : ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿದ ಕೊಹ್ಲಿ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

Team-India

ಕೋಲ್ಕತ್ತಾ,ಅ.3- ಇಲ್ಲಿ ನಡೆದ ದ್ವಿತೀಯ ಟೆಸ್ಟ್  ನಲ್ಲಿ ಪ್ರವಾಸಿ ತಂಡವನ್ನು ಬಗ್ಗು ಬಡಿದು 2-0ಯಿಂದ ಸರಣಿ ಜಯಸಿದೆ. ಈ ಮೂಲಕ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಸತತ 4ನೇ ಸರಣಿ ಗೆಲವು ಸಾಧಿಸಿದೆ. ಅಲ್ಲದೆ ಭಾರತ ಮತ್ತೆ ನಂಬರ್ ಒನ್ ರ‍್ಯಾಂಕಿಂಗ್‌ ಪಟ್ಟಕ್ಕೇರಿದೆ. ಭಾರತ-ನ್ಯೂಜಿಲೆಂಡ್ ನಡುವೆ ನಡೆದ ಎರಡನೇ ಟಸ್ಟ್ ಪಂದ್ಯದಲ್ಲಿ ಭಾರತ 178 ರನ್‍ಗಳ ಭರ್ಜರಿ ಜಯಭೇರಿ ಬಾರಿಸಿ 2-0ಯಿಂದ ಸರಣಿ ಜಯಸಿದೆ. ಐತಿಹಾಸಿಕ ಕ್ರಿಕೆಟ್ ಕಾಶಿ ಈಡಾನ್‍ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಹೀನಾಯ ಸೋಲು ಅನಭವಿಸಿತು. ಮೊದಲ ಅವಧಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಕಿವೀಸ್ ವಿರಾಮದ ವೇಳೆಗೆ ಆತಿಥೇಯ ಬೌಲರ್‍ಗಳ ಕಾರಾರುವಕ್ಕು ದಾಳಿಗೆ ನೆಲುಗಿ ಶರಣಾಯಿತು.

ಇದಕ್ಕೂ ಮುನ್ನ ಟೀಂ ಇಂಡಿಯಾ 2ನೇ ಇನಿಂಗ್ಸ್‍ನಲ್ಲಿ 263 ರನ್ ಆಲೌಟ್ ಆಗಿ ಕಿವೀಸ್‍ಗೆ 375 ರನ್‍ಗಳ ಗುರಿ ನೀಡಿತು. ಭಾರತ ಪರ ವೃದ್ಧಿಮಾನ್ ಸಹಾ ಅಜೇಯ 58 ರನ್, ಗಳಿಸಿ ತಂಡಕ್ಕೆ ಮತ್ತೆ ನೆರವಾದರು. ಈ ಬೃಹತ್ ಮೊತ್ತ ಬೆನ್ನಟ್ಟಿದ ಪ್ರವಾಸಿ ತಂಡ ಎರಡನೇ ಇನಿಂಗ್ಸ್‍ನಲ್ಲಿ ಉತ್ತಮ ಆರಂಭ ಪಡೆಯಿತು. ಆರಂಭಿಕಾದ ಮಾರ್ಟಿನ್ ಗುಪ್ಟಿಲ್ ಹಾಗೂ ಟಾಮ್ ಲಾಥಮ್ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 55 ರನ್ ಸೇರಿಸಿ ತಂಡಕ್ಕೆ ಉತ್ತಮ ಆಡಿಪಾಯ ಹಾಕಿಕೊಟ್ಟರು. ತಂಡದ ಮೊತ್ತ 55ರನ್ ಇದ್ದಾಗ ಈ ಜೋಡಿಯು ಬೇರ್ಪಟ್ಟಿತ್ತು. ಮಾರ್ಟಿನ್ ಗುಪ್ಟಿಲ್ 27 ರನ್ ಗಳಿಸಿ ಅಶ್ವಿನ್ ಬೌಲಿಂಗ್‍ನಲ್ಲಿ ಎಲ್‍ಬಿ ಬಲೆಗೆ ಬಿದ್ದರು. ಇದಾದ ಬಳಿಕ ಕ್ರೀಸ್‍ಗೆ ಆಗಮಿಸಿದ ಹೆನ್ರಿ ನಿಕೋಲಸ್, ಟಾಮ್‍ಗೆ ಸಾಥ್ ನೀಡಿದರು. 2ನೇ ವಿಕೆಟ್ ಜೊತೆಯಾಟದಲ್ಲಿ 51ರನ್ ಸೇರಿಸಿ ತಂಡಕ್ಕೆ ಆಸರೆರಾದರು. ನಿಕಲೋಸ್ 24 ರನ್‍ಗಳಿಸಿ ಆಡುವಾಗ ಜಡೇಜಾ ಬೌಲಿಂಗ್‍ನಲ್ಲಿ ರಹಾನೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ತಂಡದ ಮೊತ್ತ 11 ರನ್ ಸೇರುವಷ್ಟರಲ್ಲೇ ನಾಯಕ ರಾಸ್ ಟೇಲರ್ 4 ರನ್‍ಗೆ ಔಟಾದರು. ತಂಡದ ಪ್ರಮುಖ ಮೂವರು ಬ್ಯಾಟ್ಸ್‍ಮನ್‍ಗಳು ಔಟ್ ಆಗಿ ಕಿವೀಸ್ ಸಂಕಷ್ಟಕ್ಕೆ ಸಿಲಿಕಿತ್ತು. ಇತ್ತ ಕ್ರೀಸ್ ಗಟ್ಟಿಯಾಗಿ ನಲೆಯೂರಿ ಉತ್ತಮ ಆಟವಾಡುತ್ತಿದ್ದ ಟಾಮ್ ಲಾಥಮ್ ಭಾರತದ ಬೌಲರ್‍ರನ್ನು ಎದುರಿಸಿದರು. 74 ರನ್ ಗಳಿಸಿ ಲಾಥಮ್ ಅಶ್ವಿನ್ ಬೌಲಿಂಗ್‍ನಲ್ಲಿ ಔಟ್ ಆಗುತ್ತಿದ್ದಂತೆ ಭಾರತ ತಂಡ ಕುಣಿದು ಕುಪ್ಪಳಿಸಿತು. ಲಾಥಮ್ ಔಟಾಗುತ್ತಿದ್ದಂತೆ ಕಿವೀಸ್ ದಿಢೀರ್ ಕುಸಿತ ಕಂಡಿತು. ಸ್ನಾಂಟರ್ 9, ರೊಂಚಿ 32, ವಾಟ್ಲಿಂಗ್ 1, ಮ್ಯಾಟ್ ಹೆನ್ರಿ 18, ಜೀತನ್ ಪಟೇಲ್ 2 ಹಾಗೂ ಟ್ರೆಂಟ್ ಬೋಲ್ಟ್ 4 ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದ್ದರು.

ಅಂತಿಮವಾಗಿ ಕಿವೀಸ್ 197 ರನ್‍ಗಿ ಸರ್ವಪತನಕಂಡು 178 ರನ್ ಅಂತರದಿಂದ ಸೋಲು ಅನುಭವಿಸಿತು. ಭಾರತದ ಪರ ಅಶ್ವಿನ್ 3, ಜಡೇಜಾ 3, ಶೆಮಿ 3 ಹಾಗೂ ಭುವನೇಶ್ವರ್ ಕುಮಾರ್ 1 ವಿಕೆಟ್ ಗಳಿಸಿ ಭಾರತ ತಂಡಕ್ಕೆ ಗೆಲುವಿನ ಪ್ರಮುಖ ಪಾತ್ರವಹಿಸಿದ್ದರು. ಈಗಾಗಲೇ ಭಾರತ ತಂಡ ಟೆಸ್ಟ್ ಸರಣಿ ಜಯಿಸಿದ್ದು, ಮುಂದಿನ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಅ.8ರಂದು ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೊರ್  : 

ಭಾರತ  : 316/10  –  263/10

ನ್ಯೂಜಿಲೆಂಡ್ : 204/10 – 197/10

 

► Follow us on –  Facebook / Twitter  / Google+

 

Facebook Comments

Sri Raghav

Admin