ಸರತಿ ಸಾಲಲ್ಲಿ ನಿಂತು ಬೆವರು ಹರಿಸಿದ ನಿಮ್ಮ ಪರಿಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ ; ಮೋದಿ (Full Speech Video)

ಈ ಸುದ್ದಿಯನ್ನು ಶೇರ್ ಮಾಡಿ

Modi-Speech

ಮೊರಾದಾಬಾದ್(ಉತ್ತರ ಪ್ರದೇಶ) ಡಿ.03 : ಬಿಸಿಲು, ಮಳೆ, ಹಸಿವು ಬಾಯಾರಿಕೆ ಎನ್ನದೇ ಬ್ಯಾಂಕ್ ನಿಂದ ಹಣ ಪಡೆಯಲು ಸರತಿ ಸಾಲಲ್ಲಿ ನಿಂತುಕೊಂಡ ನಿಮ್ಮ ಶ್ರಮವನ್ನು ವ್ಯರ್ಥವಾಗಲು ಬಿಡುವುದಿಲ್ಲ, ದೇಶದ ಉನ್ನತಿಗಾಗಿ ನೀವು ಅನುಭವಿಸಿದ ನೋವನ್ನು ನಾನು ಬಲ್ಲೇ, ಪ್ರಾಮಾಣಿಕವಾಗಿ ದುಡಿದ ದುಡ್ಡಿಗಾಗಿ ನೀವು ಸರತಿ ಸಾಲಲ್ಲಿ ನಿಂತರೆ ಕೆಲವರು ನಿಮ್ಮ ಮನೆ ಮುಂದೆ ತಮ್ಮ ಕಳ್ಳ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮೆ ಮಾಡಿಕೊಳ್ಳುವಂತೆ ಬೇಡುತ್ತಾ ನಿಮ್ಮ ಮುಂದೆ ನಿಂತಿದ್ದಾರೆ. ದೇಶದ ಉನ್ನತಿಗೆ ಸರ್ಕಾರವೋದೇ ಅಲ್ಲ ಜನರೂ ಪರಿಶ್ರಮ ಪಡಬಹುದು ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ. ದೇಶ ಬದಲಾಗುತ್ತಿದೆ, ನಿಮ್ಮಿಂದಲೇ ಬದಲಾಗುತ್ತಿದೆ, ನೋಟಿನ ಕಂತೆ ಕಂತೆಗಳನ್ನು ಮನೆಯಲ್ಲಿ ಅಡಿಗಿಸಿಡ್ಡುಕೊಂಡವರ ಮುಖದ ಕಾಂತಿ ಮಾಸಿ ಹೋಗಿದೆ. ನನಗೆ ನೀವು ಸಹಕಾರ ಕೊಟ್ಟರೆ ನಾನು ನಿಮ್ಮ ಸೇವೆ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಇಂದು ಹೇಳಿದ್ದಾರೆ.

https://www.youtube.com/watch?v=CE4Z0XdEtqQ

ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ನೋಟು ರದ್ದತಿ ಕ್ರಮವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು, ‘ಬ್ಯಾಂಕ್, ಎಟಿಎಂಗಳ ಮುಂದೆ ಈಗಿರುವ ಜನಸಾಮಾನ್ಯರ ಸರತಿ ಸಾಲು ಭವಿಷ್ಯದ ಎಲ್ಲಾ ಸರತಿ ಸಾಲುಗಳಿಗೆ ಅಂತ್ಯ ಹಾಡಲಿದೆ’ ಎಂದು ಹೇಳಿದರು. ‘ಇಷ್ಟು ದಿನ ನಾವು ಸಕ್ಕರೆ, ಸೀಮೆಎಣ್ಣೆ, ಗೋಧಿಗಾಗಿ ಸರತಿ ಸಾಲಲ್ಲಿ ನಿಲ್ಲಬೇಕಾಗಿತ್ತು. ನಮ್ಮನ್ನು ಆಳಿದವರು ಹೀಗೆ 70 ವರ್ಷಗಳ ಕಾಲ ಸರತಿ ಸಾಲಲ್ಲಿ ನಿಲ್ಲಿಸಿ ದೇಶದ ಜನಸಾಮಾನ್ಯರ ಸಮಯ ಹಾಳುಮಾಡಿದ್ದಾರೆ’ ಎಂದರು. ‘ನಾನು ಒಂದು ಸರತಿ ಸಾಲು ಆರಂಭಿಸಿದ್ದೇನೆ. ಅದು ಈ ಎಲ್ಲಾ ಸರತಿ ಸಾಲುಗಳನ್ನು ಕೊನೆಗಾಣಿಸಲಿದೆ’ ಎಂದು ಮೋದಿ ತಿಳಿಸಿದರು.

ನಾನು ಜನ್ ಧನ್ ಯೋಜನೆಯಲ್ಲಿ ಅಕೌಂಟ್ ಗಳನ್ನು ತೆರೆಯಲು ಹೇಳಿದಾಗ ನಿಮಗೂ ಕೂಡ ಗೊತ್ತಿರಲಿಲ್ಲ, ಮುದೊಂದು ದಿನ ಈ ಪರಿಸ್ಥಿತಿ ಬರುತ್ತದೆ ಎಂದು. ಕಾಳಧನಿಕರು ನಿಮ್ಮ ಕಾಲುಬಿದ್ದು ನಿಮ್ಮ ಅಕೌಂಟ್ ಗೆ ಜಮೆ ಮಾಡಿರುವ ಹಣವನ್ನು ಹಿಂದಿರುಗಿಬೇಡಿ. ಮುಂದೇನು ಮಾಡಬೇಕೆಂದು ನಾನು ಯೋಚಿಸಿ ಹೇಳುತ್ತೇನೆ. ಅಲ್ಲಿಯವರೆಗೂ ಆ ಹಣ ನಿಮ್ಮ ಅಕೌಂಟ್ನಲ್ಲೇ ಇರಲಿ, ಹಣ ವಾಪಸ್ ನೀಡುವಂತೆ ಕಾಳಧನಿಕರು ನಿಮಗೆ ಬೆದರಿಕೆ ಹಾಕಿದರೆ ಮೋದಿಗೆ ಪತ್ರ ಬರೆಯುತ್ತೇನೆಂದು ಹೇಳಿ, ಯಾರಿಗೂ ಭಯಪಡಬೇಡಿ ಎಂದರು. ನಗದು ವ್ಯವಹಾರ ಆದಷ್ಟು ಕಡಿಮೆ ಮಾಡಿ, ನಿಮ್ಮ ಮೊಬೈಲ್ ಅನ್ನು ಪರ್ಸ್ ರೀತಿ ಬಳಸಲು ಮುಂದಾಗಿ. ಬಡತನ ಹೋಗಲಾಡಿಸುವ ಕಾರ್ಯಕ್ಕೆ ಜೊತೆಯಾಗಿ ಎಂದು ಹೇಳಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

 

 

Facebook Comments

Sri Raghav

Admin