ಸರದಿ ಸಾಲಿನಲ್ಲಿಯೇ ನಿಂತು ಹಾಸನಾಂಬೆ ದರ್ಶನ ಪಡೆಯುತ್ತೇನೆ : ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Hasanambhe

ಹಾಸನ,ಅ.20- ಅಧಿದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಸಾರ್ವಜನಿಕರು ಸಾಲಿನಲ್ಲಿಯೇ ನಿಂತು ದರ್ಶನ ಪಡೆಯುತ್ತೇನೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು.  ನಗರ ಪ್ರವಾಸಿ ಮಂದಿರದಲ್ಲಿ ಭೇಟೆಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ದೇವಾಲಯ ಟ್ರಸ್ಟ್ ಅಧ್ಯಕ್ಷರನ್ನು ಪರಿಗಣಿಸದೆ ಸಭೆಗಳನ್ನು ನಡೆಸಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವ ಜಿಲ್ಲಾಧಿಕಾರಿ ಚೈತ್ರ ಅವರು ನಮ್ಮ ಯಾವುದೇ ಮಾತಿಗೂ ಬೆಲೆ ಕೊಡುವುದಿಲ್ಲ. ಹಾಗಾಗಿ ನಾನು ಯಾವುದೇ ವಿಶೇಷ ದರ್ಶನ ಪಡೆಯುವುದಿಲ್ಲ. ಸಾರ್ವಜನಿಕ ಸರದಿಯಲ್ಲೇ ನಿಂತು ದರ್ಶನ ಪಡೆಯುವುದಾಗಿ ತಿಳಿಸಿದರು.

ನಮ್ಮ ಪಕ್ಷದ ಶಾಸಕರು, ಹಿತೈಷಿಗಳು ಹಾಗು ಕುಟುಂಬದ ವರ್ಗದವರಿಗೂ ಸಾರ್ವಜನಿಕ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವಂತೆ ಸೂಚನೆ ನೀಡಿರುವುದಾಗಿ ಗೌಡರು ತಿಳಿಸಿದರು.
ಹಾಸನಾಂಬೆಯ ಅಭಿವೃದ್ಧಿ ಕಾರ್ಯಗಳಿಗೆಲ್ಲ ಸಾಕಷ್ಟು ಶ್ರಮಿಸಿದ್ದೇನೆ. ಟ್ರಸ್ಟ್ ಅಧ್ಯಕ್ಷನಾಗಿರುವ ಶಾಸಕ ಎಚ್.ಎಸ್.ಪ್ರಕಾಶ್ ಅವರಿಗೂ ಸಹ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ದೇವಾಲಯದ ಟ್ರಸ್ಟ್‍ಗೆ ಅಧ್ಯಕ್ಷರಾಗಿ ಅಭಿವೃದ್ದಿಗೆ ಶ್ರಮಿಸಿರುವ ಶಾಸಕರು ಜೆಡಿಎಸ್‍ನವರು ಎಂಬ ಕಾರಣಕ್ಕೆ ಕಡೆಗಣಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಚೈತ್ರ ಅವರ ವಿರುದ್ಧ ಕಿಡಿಕಾರಿದರು.
ದೇವಾಲಯಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೂ ಮಾತನಾಡಲು ಇಚ್ಛಿಸದ ಜಿಲ್ಲಾಧಿಕಾರಿಗಳ ವರ್ತನೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಮುನಿಸಿಕೊಂಡಿದೆ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin