ಸರೆಗಮಪ ಸೀಸನ್-12 ಫಿನಾಲೆ

ಈ ಸುದ್ದಿಯನ್ನು ಶೇರ್ ಮಾಡಿ

8

ಸರೆಗಮಪ ಸೀಸನ್-12ರ ಮೂಲಕ ಮುಗ್ಧ ಮಕ್ಕಳ ಧ್ವನಿಯಲ್ಲಿ ಚೆಂದದ ಗೀತೆ ಹಾಡಿಸಿ ಸಂಗೀತ ಪ್ರಿಯರ ಮುಂದಿಟ್ಟ ವಾಹಿನಿ, ಹಾಸನ ದಲ್ಲಿ ಬೃಹತ್ ಜನಸ್ತೋಮದ ಮಧ್ಯ ಅದ್ಧೂರಿ ಫಿನಾಲೆ ನಡೆಸಿದೆ. ಎಲ್ಲ ಮಕ್ಕಳಲ್ಲಿ ಫಿನಾಲೆಗೆ ಆಯ್ಕೆಯಾದದ್ದು 6 ಜನ. ಅನ್ವಿತಾ, ವೇಣುಗೋಪಾಲ್, ಆಸ್ತಾ, ದರ್ಶನ್, ವೈಷ್ಣವಿ, ಶ್ರೀಕರ್ 6 ಮಕ್ಕಳು ವೇದಿಕೆ ಏರಿ ಹಾಡಿದ್ದಾರೆ.
ಈ ಎಲ್ಲ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಗುವಂತೆ ಮಹಾಗುರುಗಳಾಗಿ ಆಗಮಿಸಿದ ಹಂಸಲೇಖ ಮಕ್ಕಳ ಪ್ರತಿಭೆಯನ್ನು ಕೊಂಡಾಡಿ ಮೆಚ್ಚಿಕೊಂಡಿದ್ದು ವಿಶೇಷ. ಸರೆಗಮಪ ಕಾರ್ಯಕ್ರಮದ ಯಶಸ್ವಿ ನಿರ್ಣಾಯಕರಾದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಮಕ್ಕಳು ಹಾಡಿದ ಗೀತೆಗಳನ್ನುಮೆಚ್ಚಿಕೊಂಡು ವೇದಿಕೆ ಮೇಲೆ ಮಕ್ಕಳೊಟ್ಟಿಗೆ ತಾವೂ ಧ್ವನಿಗೂಡಿಸಿ ಮತ್ತಷ್ಟು ಮೆರಗು ತಂದಿದ್ದಾರೆ. ಜೀ ಕನ್ನಡ ಸರೆಗಮಪ ಸೀಸನ್ 12ರ ವಿನ್ನರ್ ಯಾರು ಎಂಬುದು ಫೆ.18 ಮತ್ತು 19ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಸರೆಗಮಪ ಲಿಟ್ಲ್ ಚಾಂಪ್ಸ್ ಸೀಸನ್ 12ರ ಕಾರ್ಯಕ್ರಮದಲ್ಲಿಯೇ ತಿಳಿಯಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin