ಸರ್ಕಾರದಿಂದ ಸವಿತಾ ಸಮಾಜ ಜಯಂತಿ ಆಚರಣೆಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕನಾಯಕನಹಳ್ಳಿ, ಫೆ.5- ಎಲ್ಲ ಸಮಾಜದ ದಾರ್ಶನಿಕರ ಜಯಂತಿಯಂತೆ ಸವಿತಾ ಸಮಾಜದ ಸವಿತಾಮಹರ್ಷಿ ಜಯಂತಿಯನ್ನು ಸರ್ಕಾರ ಆಚರಿಸಬೇಕು ಎಂದು ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಮನವಿ ಮಾಡಿದ್ದಾರೆ.ಪಟ್ಟಣದ ಡಾ.ಬಾಬು ಜಗಜೀವನರಾಂ ನಗರದಲ್ಲಿನ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸವಿತಾಮಹರ್ಷಿ ಜಯಂತೋತ್ಸವಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸಮಾಜದ ಮಹರ್ಷಿಯವರ ಜಯಂತಿಯನ್ನು ರಥಸಪ್ತಮಿಯಂದು ಆಚರಣೆಮಾಡುತ್ತಿದ್ದು ಇವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿಸಬೇಕು ಹಾಗೂ ನಮ್ಮ ಜನಾಂಗವನ್ನು 2ಎ ನಿಂದ 1ಎಗೆ ವರ್ಗಾಹಿಸಿ ಮೀಸಲಾತಿಯನ್ನು ಒದಗಿಸಬೇಕು ಮತ್ತು ನಮ್ಮ ಜನಾಂಗದ ಅಭಿವೃದ್ದಿಗೆ ನಿಗಮ ರಚಿಸಿ ಸರ್ಕಾರ ಸವಲತ್ತುಗಳನ್ನು ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾದ್ಯಯ ಶ್ರೀನಿವಾಸಮೂರ್ತಿ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಮಾಜದ ಎಲ್ಲಾರು ಒಟ್ಟಾಗಿ ಹೋರಾಟ ಮಾಡಬೇಕಾಗುತ್ತದೆ ಈ ನಿಟ್ಟಿನಲ್ಲಿ ತಾಲ್ಲೂಕಿನ ಸವಿತಾ ಸಮಾಜವನ್ನು ಸಂಘಟಿಸುವಲ್ಲಿ ಮುಖಂಡರು ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.  ಸವಿತಾ ಸಮಾಜದ ಮುಖಂಡರುಗಳಾದ ತಾಲ್ಲೂಕು ಪ್ರತಿನಿಧಿ ಶಿವಣ್ಣ(ಗೊಲ್ಡನ್), ನಟರಾಜು, ಸತೀಶ್, ಧರಣಿ ಸೇರಿದಂತೆ ಮತ್ತಿತರರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin