ಸರ್ಕಾರಿ ಆಸ್ಪತ್ರೆಗಳಲ್ಲಿ ಜಾತಕ-ಕುಂಡಲಿ ಮೂಲಕ ಖಾಯಿಲೆ ಪರೀಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

Govt-Hospitala

ಭೂಪಾಲ್,ಜು.17-ಇನ್ನು ಕೆಲವೇ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಂತೆ ಜಾತಕ, ಕುಂಡಲಿ ಸಲಹೆ ಮೂಲಕ ರೋಗಿಗಳ ಖಾಯಿಲೆ ಪರೀಕ್ಷೆ ನಡೆಯುತ್ತಂತೆ. ಹೌದು, ಇದು ಮಧ್ಯ ಪ್ರದೇಶದ ಸರ್ಕಾರದ ಚಿಂತನೆ ಆಗಿದೆ.  ಇಲ್ಲಿನ ಸರ್ಕಾರಿ ಸಂಸ್ಥೆಯಾಗಿರುವ ಮಹರ್ಷಿ ಪತಂಜಲಿ ಸಂಸ್ಕøತ ಸಂಸ್ಥಾನದ ವತಿಯಿಂದ ಈ ವರ್ಷದ ಸೆಪ್ಟಂಬರ್ ಅಂತ್ಯದ ವೇಳೆಗೆ ವಾರಕ್ಕೆರಡು ಬಾರಿ ಹೊರರೋಗಿ ವಿಭಾಗದಲ್ಲಿ ಜ್ಯೋತಿಷಿಗಳ ಸಲಹೆ-ಸೂಚನೆ ಲಭ್ಯತೆ ಇರಲಿದೆ. 5 ರೂ. ಫೀನೊಂದಿಗೆ ಸೇವೆ ಒದಗಲಿದ್ದು, ವಾರಾಂತ್ಯದಲ್ಲಿ ರೋಗ ಪತ್ತೆ ಹಚ್ಚುವಿಕೆ, ರೋಗ ನಿರ್ಣಯಗಳನ್ನೂ ಮಾಡಲಿದ್ದಾರೆ. ಇದೊಂದು ಪುರಾತನ ವಿಜ್ಞಾನವೆಂದು ಸಂಸ್ಕøತ ಸಂಸ್ಥಾನದ ನಿರ್ದೇಶಕ ಪಿ.ಆರ್. ತಿವಾರಿ ಹೇಳಿದ್ದಾರೆ.
ಆದ್ರೆ ಮಧ್ಯಪ್ರದೇಶ ವೈದ್ಯರ ಸಂಘದ ಡಾ. ಲಲಿತ್ ಶ್ರೀವಾಸ್ತವ್ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಜ್ಯೋತಿಷ್ಯಶಾಸ್ತ್ರವನ್ನು ವೈದ್ಯಕೀಯ ವಿe್ಞÁನದಲ್ಲಿ ತರುವುದು ಸರಿಯಲ್ಲ ಎಂದಿದ್ದಾರೆ. ಜ್ಯೋತಿಷಿಗಳು ವೈದ್ಯಕೀಯ ವಿe್ಞÁನಕ್ಕೆ ಕಾಲಿಟ್ಟರೆ, ಮುಂದೊಂದು ದಿನ ಮಾಠಗಾರರು ಸಹ ಬರಲಿದ್ದಾರೆ ಎಂದು ಟೀಕಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin