ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಹಿಳೆಯೊಬ್ಬರು ನವಜಾತ, ಹೆಣ್ಣು, ಶಿಶುವನ್ನು, ಬಿಟ್ಟು ಹೋಗಿರುವ ಘಟನೆ

ಈ ಸುದ್ದಿಯನ್ನು ಶೇರ್ ಮಾಡಿ

beluru--baby

ಬೇಲೂರು, ಅ.10- ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಹಿಳೆಯೊಬ್ಬರು ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದು, ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಸರಳ ವಶಕ್ಕೆ ಪಡೆದಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಸರಳ, ಆಗತಾನೆ ಹುಟ್ಟಿದ ಹೆಣ್ಣು ಮಗುವನ್ನು ಯಾರೋ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿರುವುದಾಗಿ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಆವರಣದಲ್ಲಿದ್ದ ಹೆಣ್ಣು ಮಗುವನ್ನು ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

9blrp1

ಈ ಮಗುವಿನ ವಾರಸುದಾರರು ಯಾರು ಇಲ್ಲದ್ದರಿಂದ ಮಗುವನ್ನು ಹಾಸನದ ಮಕ್ಕಳ ಸಹಾಯವಾಣಿ ಪ್ರಚೋದನ ಸಂಸ್ಥೆಯ ಮೂಲಕ ಹಾಸನದಲ್ಲಿರುವ ತವರು ಚಾರಿಟಬಲ್ ಟ್ರಸ್ಟ್‍ಗೆ ಮಗುವನ್ನು ಹಸ್ತಾಂತರಿಸಲಾಗುತ್ತಿದ್ದು, ತವರು ಚಾರಿಟಬಲ್ ಟ್ರಸ್ಟ್ ಈ ಹೆಣ್ಣು ಮಗುವನ್ನು ಹಾರೈಕೆ ಮಾಡಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಾಸನ ಮಕ್ಕಳ ಸಹಾಯವಾಣಿ ಪ್ರಚೋದನ ಸಂಸ್ಥೆಯ ಶಶಿಕಲಾ, ತವರು ಚಾರಿಟಬಲ್ ಟ್ರಸ್ಟ್‍ನ ರಂಗಸ್ವಾಮಿ, ತಾರಾಬಾಯಿ ಹಾಗೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin