ಸರ್ಕಾರಿ ಆಸ್ಪತ್ರೆ ಸರ್ಜನ್‍ಗೆ ಆರೋಗ್ಯಾಧಿಕಾರಿ ತರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

hospital

ವಿಜಯಪುರ, ಅ.18-ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಮೇಶ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ, ಸರ್ಜನ್‍ವೊಬ್ಬರು ಖಾಸಗಿ ಆಸ್ಪತ್ರೆಗೆ ಔಷಧಿ ಕೊಳ್ಳಲು ಚೀಟಿ ಬರೆದುಕೊಡುತ್ತಿದ್ದುದನ್ನು ಕಂಡು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಯಾವುದೇ ಕಂಪನಿಗಳ ಟ್ರೇಡ್ ಹೆಸರಿನ ಔಷಧಿಗಳನ್ನು ಕೊಳ್ಳಲು ಶಿಫಾರಸು ಮಾಡುವಂತಿಲ್ಲ. ಆದರೂ ಇಲ್ಲಿನ ಸರ್ಜನ್‍ವೊಬ್ಬರು ಖಾಸಗಿ ಆಸ್ಪತ್ರೆ ನಡೆಸುತ್ತಿದ್ದು, ಮಾತ್ರೆ, ಇಂಜೆಕ್ಷನ್, ಔಷಧಿಗಳನ್ನು ಅವರ ಕ್ಲಿನಿಕ್‍ನ ಮಳಿಗೆಯಿಂದ ತರಲು ಚೀಟಿ ಬರೆದುಕೊಡುತ್ತಿರುವುದಲ್ಲದೇ ಬರುವ ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆ ವೈದ್ಯರಿಗೆ ನೋಟೀಸ್ ಜಾರಿ ಮಾಡಲಾಗಿದೆ, ಮುಂದೆಯೂ ಅದೇ ನಡವಳಿಕೆ ಮುಂದುವರಿದರೆ ಆಯುಕ್ತರಿಗೆ ಕ್ರಮಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.

ಆಸ್ಪತ್ರೆ ಆವರಣದಲ್ಲಿ ಜೆನರಿಕ್ ಔಷಧಿ ಮಳಿಗೆ ಆರಂಭಿಸಲು ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರ ಸರ್ಕಾರದ 2.5 ಲಕ್ಷ ರೂ ಅನುದಾನದಲ್ಲಿ ಮಳಿಗೆ ಆರಂಭಿಸಿ ಬರುವ ಬಡ್ಡಿಯನ್ನು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಲು ತಿಳಿಸಿದೆ. ರೋಗಿಗಳಿಗೆ ಮಾತ್ರೆ, ಔಷಧಿ, ಇಂಜೆಕ್ಷನ್‍ಗಳನ್ನು ಹೊರಗಡೆ ಅಂಗಡಿಗಳಿಂದ ಕೊಂಡು ತರಲು ಚೀಟಿ ಬರೆದುಕೊಟ್ಟರೆ ಕ್ರಮಕೈಗೊಳ್ಳುವುದಾಗಿ ಎಂದು ಅವರು ತಿಳಿಸಿದರು.ವೈದ್ಯಾಧಿಕಾರಿ ಡಾ.ಮಂಜುಳಾ, ಶುಶ್ರೂಷಕಿ ಶಾರದಮ್ಮ, ರೂಪಾ, ಪ್ರಸನ್ನ, ಮತ್ತಿತರರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin