ಸರ್ಕಾರಿ ಕಟ್ಟಡದ ಮೇಲೆ ಉಗ್ರರ ದಾಳಿ, ಎನ್‍ಕೌಂಟರ್‍ನಲ್ಲಿ ಯೋಧನಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

pampor

ಶ್ರೀನಗರ,ಅ.10-ಭಾರತೀಯರ ಯೋಧರ ಸರ್ಜಿಕಲ್ ದಾಳಿ ನಂತರ ಆತಂಕದ ನಿರೀಕ್ಷೆಯಂತೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಆಕ್ರಮಣಗಳನ್ನು ತೀವ್ರಗೊಳಿಸಿದ್ದು , ಕಾಶ್ಮೀರ ಕಣಿವೆಯ ಶ್ರೀನಗರದ ಪಾಂಪೋರ್‍ನ ಸರ್ಕಾರಿ ಕಟ್ಟಡದ ಮೇಲೆ ದಾಳಿ ನಡೆಸಿದ್ದಾರೆ. ಉಗ್ರರ ನಿಗ್ರಹಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಓರ್ವ ಯೋಧನಿಗೆ ಗಾಯಗಳಾಗಿವೆ.
ಪಾಂಪೋರ್ ಪ್ರದೇಶದ ಉದ್ಯಮಶೀಲತಾ ಅಭಿವೃದ್ದಿ ಸಂಸ್ಥೆ(ಇಡಿಐ) ಕಟ್ಟಡಕ್ಕೆ ಇಂದು ಮುಂಜಾನೆ ಮೂವರು ಉಗ್ರರು ನುಗ್ಗಿ ಕುಕೃತ್ಯ ಎಸಗಲು ಯತ್ನಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಯೋಧರು ಉಗ್ರರತ್ತ ಗುಂಡು ಹಾರಿಸಿದಾಗ ಪ್ರತಿದಾಳಿ ನಡೆದು ಎನ್‍ಕೌಂಟರ್ ಮುಂದುವರೆಯಿತು.

ಗುಂಡಿನ ಕಾಳದಲ್ಲಿ ಓರ್ವ ಯೋಧನಿಗೆ ಗಾಯಗಳಾಗಿವೆ. ಈ ಕಟ್ಟಡದ ಒಂದು ಭಾಗ ಬೆಂಕಿಗೆ ಆಹುತಿಯಾಗಿದೆ. ಉಗ್ರರು ಕಳೆದ ಏಪ್ರಿಲ್‍ನಲ್ಲಿ ಇದೇ ಕಟ್ಟಡದ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು.  ಕಟ್ಟಡದೊಳಗೆ ಅಡಗಿರುವ ಮೂವರು ಉಗ್ರರನ್ನು ಸದೆಬಡೆಯಲು ಗುಂಡಿನ ಚಕಮಕಿ ಮುಂದುವರೆದಿದೆ.

► Follow us on –  Facebook / Twitter  / Google+

Facebook Comments

Sri Raghav

Admin